ಶಿವಣ್ಣ @ 57

356

ಲಂಡನ್: ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ತಮ್ಮ 57ನೇ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ. ಇದರ ಜೊತೆಗೆ ಅಲ್ಲಿಂದಲೇ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಪ್ರತಿವರ್ಷ ಫ್ಯಾನ್ಸ್ ಜೊತೆ ಬರ್ಥ್ ಡೇ ಆಚರಿಸಿಕೊಳ್ತಿದ್ದ ಶಿವಣ್ಣ, ಶಸ್ತ್ರ ಚಿಕಿತ್ಸೆ ಸಲುವಾಗಿ ಲಂಡನ್ ಗೆ ಹೋಗಿರುವ ಕಾರಣದಿಂದ, ಇಂದು ಅಲ್ಲಿಯೇ ಸರಳವಾಗಿ ತಮ್ಮ ಆಪ್ತರೊಂದಿಗೆ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ವೇಳೆ ತಮ್ಮ ಪವರ್ ಸ್ಟಾರ್ ಪುನೀತರಾಜಕುಮಾರ ಸಹ ಜೊತೆಗಿದ್ರು. ನಿನ್ನೆಯಷ್ಟೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 45 ನಿಮಿಷಗಳ ಚಿಕಿತ್ಸೆಯಾಗಿದ್ದು, ನಾನು ಈಗ ಚೆನ್ನಾಗಿದ್ದೇನೆ ಅಂತಾ ಅಭಿಮಾನಿಗಳಿಗೆ ಸಂದೇಶ ಕಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಶಿವಣ್ಣ ಇನ್ನೊಂದು ತಿಂಗಳು ಶೂಟಿಂಗ್ ನಲ್ಲಿ ಭಾಗವಹಿಸಲು ಆಗೋದಿಲ್ಲ. ಇದರ ಜೊತೆಗೆ ಎರಡು ತಿಂಗಳ ಕಾಲ ಸ್ಟಂಟ್ ಮಾಡುವ ಹಾಗಿಲ್ಲ. ಹೀಗಾಗಿ ಒಂದಿಷ್ಟು ದಿನಗಳ ಕಾಲ ರೆಸ್ಟ್ ಮಾಡಲಿದ್ದು, ಬಳಿಕ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಸ್ಯಾಂಡಲ್ ವುಡ್ ಸೇರಿದಂತೆ ಸೌಥ್ ಹಾಗೂ ಬಾಲಿವುಡ್ ಸ್ಟಾರ್ ನಟ, ನಟಿಯರು ಶಿವಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!