ವೇದ ಟೀಸರ್ ಆರ್ಭಟ

150

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಾಕಷ್ಟು ಕುತೂಹಲ ಮೂಡಿಸಿರುವ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ನಟನೆಯ ವೇದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಪ್ರತಿಯೊಬ್ಬರು ಶಿವಣ್ಣನ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಕನ್ನಡದಿಂದ ಮತ್ತೊಂದು ಮಾಸ್ಟರ್ ಪೀಸ್ ಚಿತ್ರ ಬರುತ್ತಿದೆ ಎನ್ನುತ್ತಿದ್ದಾರೆ.

ಬಿಜಿಎಂ, ಸಿನಿಮಾಟೋಗ್ರಫಿ ನೋಡುಗರನ್ನು ಹುಚ್ಚು ಹಿಡಿಸಿದೆ. 1960ರ ರಕ್ತಚರಿತ್ರೆಯನ್ನು ವೇದ ಹೊಂದಿದೆ. ನಿರ್ದೇಶಕ ಎ.ಹರ್ಷಾ ಜೊತೆ ಶಿವಣ್ಣನ 4ನೇ ಚಿತ್ರವಿದು. ಅರ್ಜುನ್ ಜನ್ಯ ಮ್ಯೂಸಿಕ್ ಇದೆ. ಜಿ ಸ್ಟುಡಿಯೋ ಹಾಗೂ ಗೀತಾ ಶಿವರಾಜಕುಮಾರ್ ಅವರ ಗೀತಾ ಪಿಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಇದು ಶಿವಣ್ಣನ 125ನೇ ಸಿನಿಮಾ ಆಗಿದೆ. ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಸ್ವೇತಾ ಚಂಗಪ್ಪ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಡಿಸೆಂಬರ್ 23ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!