ವಿಪ್ ಅಂದರೆ ಏನು? ಇದನ್ನ ಯಾವಾಗ ಪ್ರಯೋಗ ಮಾಡಲಾಗುತ್ತೆ?

1469

ಇದೀಗ ರಾಜ್ಯ ರಾಜಕೀಯದಲ್ಲಿ ಸಾಂವಿಧಾನಿಕ ಬಿಕ್ಕಟು ಉಂಟಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಶಾಸಕರು ರಾಜೀನಾಮೆ ನೀಡಿರುವುದ್ರಿಂದ ಮೈತ್ರಿ ಸರ್ಕಾರದ ಮೇಲೆ ಕಾರ್ಮೋಡ ಕವಿದಿದೆ. ಅದನ್ನ ಹೇಗಾದ್ರೂ ಮಾಡಿ ಸರಿಸುವುದು ಸರ್ಕಾರದ ಪ್ಲಾನ್. ಹೀಗಾಗಿ ವಿಪ್ ಅಸ್ತ್ರ ಪ್ರಯೋಗವನ್ನ ಕಾಂಗ್ರೆಸ್-ಜೆಡಿಎಸ್ ಪಕ್ಷ ಮಾಡಿವೆ.

ವಿಪ್ ಜಾರಿ ಮಾಡುವ ಮೂಲಕ ಶಾಸಕರನ್ನ ಮರಳಿ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳಲು ಸರ್ಕಾರ ಈ ನಿರ್ಧಾರ ಮಾಡಿದೆ. ಈಗಾಗ್ಲೇ ಬಜೆಟ್ ಅಧಿವೇಶನ ಇಂದು ಶುರುವಾಗಿದೆ. ಜುಲೈ 26ರ ತನಕ ಅಧಿವೇಶನ ನಡೆಯಲಿದೆ. ಈ ವೇಳೆ ಮೈತ್ರಿ ಸರ್ಕಾರದ ಪ್ರತಿಯೊಬ್ಬ ಶಾಸಕರು ಸಧನದಲ್ಲಿ ಹಾಜರಿರಬೇಕು. ಒಂದು ವೇಳೆ ಇಲ್ಲದೇ ಹೋದ್ರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಹೀಗಾಗಿಯೇ ವಿಪ್ ಜಾರಿ ಮಾಡಲಾಗುತ್ತೆ.

ವಿಪ್ ಅಂದರೆ ಏನು?

ಅಧಿವೇಶನ, ಬಜೆಟ್ ಮಂಡನೆ ಹಾಗೂ ತುರ್ತು ಸಂದರ್ಭಗಳಲ್ಲಿ ವಿಪ್ ಜಾರಿ ಮಾಡಲಾಗುತ್ತೆ. ಇದರಲ್ಲಿ ಈ ದಿನಾಂಕದಿಂದ ಈ ದಿನಾಂಕದವರೆಗೂ ಶಾಸಕರು ಕಡ್ಡಾಯವಾಗಿ ಹಾಜರಿ ಇರಬೇಕು. ಸರ್ಕಾರದ ಪರ ಮತ ಚಲಾಯಿಸಬೇಕು. ಒಂದು ವೇಳೆ ಶಾಸಕರು ಗೈರಾದ್ರೆ, ವಿಪ್ ಉಲ್ಲಂಘನೆ ಆಗಿದೆಯಂದು ಶಾಸಕಾಂಗದ ಪಕ್ಷದ ನಾಯಕ ಅಥವ ಮುಖ್ಯ ಸಚೇತಕರು ಸಭಾಧ್ಯಕ್ಷರಿಗೆ ದೂರು ಸಲ್ಲಿಸಲು ಅವಕಾಶವಿದೆ.

ಯಾವುದೇ ಒಂದು ಪಕ್ಷ ತನ್ನ ಸದಸ್ಯರಿಗೆ, ಪಕ್ಷದ ಚಿಹ್ನೆಯಡಿ ಬಿ ಫಾರ್ಮ್ ಪಡೆದು ಶಾಸಕ, ಸಂಸದರಾಗಿ ಆಯ್ಕೆ ಆದವರಿಗೆ, ಅನಿವಾರ್ಯ ಸಂದರ್ಭಗಳಲ್ಲಿ, ಪಕ್ಷದ ತೀರ್ಮಾನಕ್ಕೆ ಬೆಂಬಲ ನೀಡುವ ಸಲುವಾಗಿ ಜಾರಿ ಮಾಡುವ ನೋಟಿಸ್ ಆಗಿದೆ. ಒಂದು ವೇಳೆ ಇದನ್ನ ಉಲ್ಲಂಘಿಸಿದ್ರೆ, ಆಗ ಸಂವಿಧಾನದ ಅನುಚ್ಛೇದ 10ರ ಪ್ರಕಾರ (ಪಕ್ಷಾಂತರ ನಿಷೇಧ ಕಾಯ್ದೆ) ಕ್ರಮ ಕೈಗೊಳ್ಳಬಹುದು.

  1. ವಿಶ್ವಾಸ ಮತಯಾಚನೆ ಟೈಂನಲ್ಲಿ ಸರ್ಕಾರದ ಪರ ಇರಬೇಕು. ಪಕ್ಷದ ಆದೇಶ ಪಾಲನೆ ಮಾಡಬೇಕು.
  2. ಬಜೆಟ್ ಹಾಗೂ ಪ್ರಮುಖ  ವಿಧೇಯಕಗಳ ಮಂಡನೆ ಮತ್ತು ಅನುಮೋದನೆ ವೇಳೆ ಶಾಸಕಾಂಗದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ನೀಡುವ ನೋಟಿಸ್.
  3. ಅಧಿವೇಶನದಲ್ಲಿ ಕಡ್ಡಾಯ ಹಾಜರಾತಿ, ವಿತ್ತಿಯ ಕಾರ್ಯಕಲಾಪದಲ್ಲಿ ಭಾಗವಹಿಸುವುದು, ಬಜೆಟ್ ಅನುಮೋದನೆ ವೇಲೆ ಸರ್ಕಾರದ ಪರ ಮತ ಚಾಲಾಯಿಸುವುದು.

ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಂನಲ್ಲಿ ವಿಪ್ ಜಾರಿ ಮಾಡಲಾಗುತ್ತೆ. ಪಕ್ಷಾಂತರ ಕಾಯ್ದೆ ಅಡಿ ಅವರ ಸದಸ್ಯತ್ವ ರದ್ದಾದ್ರೆ, 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

ಕೃಪೆ: ಇಂಟರ್ ನೆಟ್

ಇನ್ನು ರಾಜೀನಾಮೆ ಅಂಗೀಕಾರವಾಗದ ಶಾಸಕರಿಗೆ ವಿಪ್ ಅನ್ವಯ ಆಗುತ್ತೋ ಇಲ್ವೋ ಅನ್ನೋ ಗೊಂದಲವಿದೆ. ಕೆಲವು ಕಾನೂನು ತಜ್ಞರು, ರಾಜೀನಾಮೆ ಅಂಗೀಕಾರವಾಗುವ ತನಕ ವಿಪ್ ಅನ್ವಯವಾಗುತ್ತೆ ಅಂತಾರೆ. ಇನ್ನು ಕೆಲವರು ಬರೋದಿಲ್ಲ ಅಂತಾರೆ. ಹೀಗಾಗಿ ಸಧ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಈ ಅಸ್ತ್ರ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋ ಕುತೂಹಲವಿದೆ.


TAG


Leave a Reply

Your email address will not be published. Required fields are marked *

error: Content is protected !!