ಮಳೆಗೆ ‘ಉತ್ತರ’ದಲ್ಲಿ ಸಾವಿನ ನೃತನ

362

ನವದೆಹಲಿ: ಉತ್ತರ ಭಾರತದಲ್ಲಿ ವರುಣನ ಅಬ್ಬರ ಜೋರಾಗಿದೆ. ಇದ್ರಿಂದಾಗಿ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಉತ್ತರ ಪ್ರದೇಶ ಹಾಗೂ ಬಿಹಾರದ ಪಾಟ್ನಾದಲ್ಲಿ ಸಾವಿನ ನೃತನವಾಗ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಮಂಗಳವಾರದವರೆಗೂ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗ್ಲೇ ಸಾವಿರಾರು ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗ್ತಿದೆ. ಹೆಲಿಕಾಪ್ಟರ್ ಮೂಲಕ ಆಹಾರ ಒದಗಿಸಲು ಬಿಹಾರ ಸಿಎಂ ನಿತೀಶಕುಮಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಪಟ್ನಾದಲ್ಲಿ ಇದುವರೆಗೂ 29 ಜನ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 87 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಎಲ್ಲ ರೀತಿ ಸೂಕ್ತ ನೆರವು ನೀಡಿಯೆಂದು ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ ಸೂಚಿಸಿದ್ದಾರೆ. 1960ರ ಬಳಿಕ ಇದೆ ಮೊದಲ ಬಾರಿಗೆ ಮುಂಗಾರು ವಿಳಂಬವಾಗಿ ಮುಕ್ತಾಯವಾಗ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಷ್ಟಾದ್ರೂ ಪ್ರಧಾನಿ ಮೋದಿ ಮೌನ ಮುರಿದು ದೇಶದಲ್ಲಿ ಆಗ್ತಿರುವ ಅನಾಹುತಗಳ ಬಗ್ಗೆ ಮಾತ್ನಾಡದೇ ಇರೋದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!