ಬ್ಯಾಸ್ಕೆಟ್ ಬಾಲ್ ಸ್ಟಾರ್ ಪ್ಲೇಯರ್ ಕೋಬೆ ದುರ್ಮರಣ

313

ನ್ಯೂಯಾರ್ಕ್: ವರ್ಲ್ಡ್ ಬ್ಯಾಸ್ಕೆಟ್ ಬಾಲ್ ಸ್ಟಾರ್ ಪ್ಲೇಯರ್ ಕೋಬೆ ಬ್ರಯಾಂಟ್ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ. ಕ್ಯಾಲಿಪೋರ್ನಿಯಾದ ಕ್ಯಾಲಬಾಸಾಸ್ ಹತ್ತಿರ ಪತನವಾದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

41 ವಯಸ್ಸಿನ ಬ್ಯಾಸ್ಕೆಟ್ ಬಾಲ್ ದಂತಕತೆಯಾಗಿರುವ ಕೋಬೆ ನಿಧನಕ್ಕೆ ಕ್ರೀಡಾಲೋಕ ಶೋಕಸಾಗರದಲ್ಲಿ ಮುಳುಗಿದೆ. ಲಾಸ್ ಏಂಜಲಿಸ್ ಸ್ಟೈಕರ್ಸ್ ತಂಡದ ಸ್ಟಾರ್ ಆಟಗಾರ ಬಹುದೊಡ್ಡ ಹೆಸರು ಮಾಡಿದ್ರು. ಐದು ಬಾರಿ ಪ್ರತಿಷ್ಠಿತ ಎನ್ ಬಿಎ ಚಾಂಪಿಯನ್ ಆಗಿದ್ರು.

ಸಿರ್ಕೋರ್ಸ್ಕಿ ಎಸ್-76 ಮಾದರಿಯ ಹೆಲಿಕಾಪ್ಟರ್ ಪತನಗೊಂಡಿದೆ. ಇದರಲ್ಲಿ ಕೋಬೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ನಿ ವೆನೀಸಾ ಹಾಗೂ ನಾಲ್ವರು ಮಕ್ಕಳನ್ನು ಕೋಬೆ ಅಗಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!