ಆಸ್ಪತ್ರೆಗಾಗಿ ಸಿಂದಗಿ ರೋಗಿಯ ಅಲೆದಾಟ… ಡಿಸಿ ಮಾಡಿದ್ದೇನು?

591

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರೋನಾ ಮಹಾಮಾರಿಯಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಕರೋನಾ ಸೋಂಕಿನ ಲಕ್ಷಣಗಳು ಇಲ್ಲದಿದ್ರೂ, ಇತರೆ ರೋಗಿಗಳಿಗೆ ಸರಿಯಾದ ಟೈಂಗೆ ಚಿಕಿತ್ಸೆ ಸಿಗ್ತಿಲ್ಲ. ಹೀಗಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ರೋಗಿಯೊಬ್ಬರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಇದ್ರಿಂದ ಬೇಸತ ಆತ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಡಿಸಿ ವೈ.ಎಸ್. ಪಾಟೀಲ ಅವರನ್ನ ಭೇಟಿಯಾಗಿದ್ದಾರೆ. ಅವರ ಮುಂದೆ ತಮ್ಮ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ.

ರೋಗಿಯ ಸಮಸ್ಯೆಯನ್ನ ತಿಳಿದುಕೊಂಡ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು, ತಕ್ಷಣವೇ ಜಿಲ್ಲಾಸ್ಪತ್ರೆಗೆ ಫೋನ್ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಬಳಿಕ ನೀವು ಹೋಗಿ ಜಿಲ್ಲಾಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ತಮ್ಮ ಸಮಸ್ಯೆಗೆ ಸ್ಪಂದಿಸಿದ ಡಿಸಿಗೆ ಧನ್ಯವಾದಗಳನ್ನ ಅವರು ಸಲ್ಲಿಸಿದ್ದಾರೆ. ಆದ್ರೆ, ಇದು ಬರೀ ಒಬ್ಬ ರೋಗಿಯ ಸಮಸ್ಯೆ ಅಲ್ಲ. ಹಲವಾರು ರೋಗಿಗಳು ಆಸ್ಪತ್ರೆಯ ಸಮಸ್ಯೆ ಎದುರಿಸ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!