ರಾಜ್ಯದಲ್ಲಿ ಕರೋನಾ ಹೆಸರಿನಲ್ಲಿ ಬೆಟ್ಟಿಂಗ್…!

373

ಪ್ರಜಾಸ್ತ್ರ ಸುದ್ದಿ

ಮೈಸೂರು: ಬೆಟ್ಟಿಂಗ್ ಅಂದ್ರೆ ಸಾಕು ಅಲ್ಲಿ ಕ್ರಿಕೆಟ್, ರೇಸ್, ಹಳ್ಳಿ ಕ್ರೀಡೆಗಳು ಸೇರಿದಂತೆ ಒಂದಿಷ್ಟು ವಿಚಾರಗಳು ನೆನಪಿಗೆ ಬರುತ್ತವೆ. ಇದು ಅಪರಾಧ ಅನ್ನೋದು ಗೊತ್ತಿದ್ರೂ ಕೆಲವರು ಕದ್ದು ಮುಚ್ಚಿ ಆಡ್ತಾರೆ. ಇಂಥಾ ಬೆಟ್ಟಿಂಗ್ ದಂಧೆ ಕರೋನಾ ವಿಚಾರದಲ್ಲಿ ಎಂಟ್ರಿ ಕೊಟ್ಟಿದೆ ಅಂದ್ರೆ ನಂಬಬೇಕು.

ಹೌದು, ಮೈಸೂರು, ಹಳೆ ಮೈಸೂರು ಭಾಗ, ಚಾಮರಾಜನಗರ ಸೇರಿದಂತೆ ಕೆಲ ಕಡೆ ಕರೋನಾ ಹೆಲ್ತ್ ಬುಲೆಟಿನ್ ಮೇಲೆ ಬಾಜಿ ಕಟ್ಟುತ್ತಿದ್ದಾರೆ. ಅಂದ್ರೆ, ಇವತ್ತು ಇಷ್ಟು ಸೋಂಕು ಪ್ರಕರಣ ಪತ್ತೆಯಾಗುತ್ತವೆ. ಈ ಜಿಲ್ಲೆ ಟಾಪ್ ಲಿಸ್ಟ್ ನಲ್ಲಿ ಇರುತ್ತೆ ಅನ್ನೋದು ಸೇರಿ ಸಾವು ನೋವಿನಲ್ಲೂ ಬೆಟ್ಟಿಂಗ್ ನಡೆಯುತ್ತಿದೆ.

ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ವಿಚಿತ್ರ ಬೆಟ್ಟಿಂಗ್ ದಂಧೆ 100, 500 ರೂಪಾಯಿಗೆ ನಡೆಯುತ್ತಿದೆ. ಆನ್ ಲೈನ್ ಮನಿ ಟ್ರಾನ್ಸಪರ್ ಮಾಡುವುದ್ರಿಂದ ಪೊಲೀಸರಿಗೂ ಇದು ತಿಳಿಯುತ್ತಿಲ್ಲವೆಂದು ಹೇಳಲಾಗ್ತಿದ್ದು, ಟೀ ಅಂಗಡಿಯೊಂದರ ಮುಂದೆ ವ್ಯಕ್ತಿಯೊಬ್ಬ ಫೋನ್ ನಲ್ಲಿ ಮಾತ್ನಾಡ್ತಿರುವುದ್ರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.




Leave a Reply

Your email address will not be published. Required fields are marked *

error: Content is protected !!