ವೀಕೆಂಡ್ ಲೈವ್ ಕಿಚ್ಚ ಸುದೀಪ

309

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ ಲಾಕ್ ಡೌನ್ ಟೈಂನಲ್ಲಿ ಬಾಡಿ ಫಿಟ್ನೆಸ್ ಸೇರಿದಂತೆ ಒಂದಿಷ್ಟು ಕೆಲಸಗಳನ್ನ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬರುವ ಮೂಲಕ, ರಾಜ್ಯ, ಹೊರ ರಾಜ್ಯ, ವಿದೇಶಗಳಲ್ಲಿರುವ ಕನ್ನಡಿಗರ ಜೊತೆಯೂ ನಟ ಸುದೀಪ ಮಾತ್ನಾಡ್ತಿದ್ದಾರೆ.

ವೀಕೆಂಡ್ ನಲ್ಲಿ ರಾತ್ರಿ 8 ಗಂಟೆಯಿಂದ 10ಗಂಟೆಯ ತನಕ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬರುವುದರೊಂದಿಗೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸ್ತಾರೆ. ಇದರೊಂದಿಗೆ ಕರೋನಾ ಲಾಕ್ ಡೌನ್ ಟೈಂನಲ್ಲಿ ಅಭಿಮಾನಿಗಳಿಂದ ದೂರ ಉಳಿಯದೆ, ಅವರಿಗೆ ಮತ್ತಷ್ಟು ಹತ್ತಿರವಾಗ್ತಿದ್ದಾರೆ.

ನಾಳೆ ಮತ್ತು ನಾಡಿದ್ದು ನಟ ಸುದೀಪ ಲೈವ್ ಬರ್ತಿದ್ದು, ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ವಾರಂತ್ಯದ ಎರಡು ದಿನಗಳಲ್ಲಿ ಒಂದಿಷ್ಟು ಕಾಲ ಫ್ಯಾನ್ಸ್ ಒಟ್ಟಿಗೆ ಕಾಲ ಕಳೆಯುವುದರೊಂದಿಗೆ ಖುಷಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!