4 ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ

325

ಪ್ರಜಾಸ್ತ್ರ ಸಿನಿಮಾ ಸುದ್ದಿ

ನಟ ಕಿಚ್ಚ ಸುದೀಪ ಹಾಗೂ ಅವರ ಟೀಂ ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯಗಳನ್ನ ಮಾಡಿಕೊಂಡು ಬರುತ್ತೆ. ಈ ಮೂಲಕ ತಾವು ಬರೀ ಸ್ಕ್ರೀನ್ ಮೇಲೆ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್ ನಲ್ಲಿಯೂ ಒಂದಿಷ್ಟು ಕೆಲಸ ಮಾಡ್ತೀವಿ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಇದೀಗ 4 ಸರ್ಕಾರಿ ಶಾಲೆಗಳನ್ನ ದತ್ತು ಪಡೆಯುವ ಮೂಲಕ, ಅವುಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ಅವರು, ಸರ್ಕಾರದ ಜೊತೆ ಕೈಜೋಡಿಸಿ ಶಿವಮೊಗ್ಗದ 4 ಸರ್ಕಾರಿ ಶಾಲೆಗಳನ್ನ ದತ್ತು ಪಡೆದು, ಅಭಿವೃದ್ಧಿ ಪಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ನಟ ಸುದೀಪ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!