1 ಮಿಲಿಯನ್ ದಾಟಿದ 3 ವಾರದಲ್ಲೇ 2 ಮಿಲಿಯನ್ ಸೋಂಕಿತರು

279

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಬರೋಬ್ಬರಿ 62,064 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ದಾಖಲೆಯ ಸೋಂಕಿತರ ಸಂಖ್ಯೆಯಾಗಿದ್ದು, 22,15,075ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

15,35,744 ಜನರು ಗುಣಮುಖರಾಗಿದ್ದು, 6,34,945 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1007 ಜನರ ಸಾವಿನೊಂದಿಗೆ 44,386ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ 1 ಮಿಲಿಯನ್ ಸೋಂಕಿತರು ದಾಟಿದ್ರು ಎಂದು ಹೇಳಿದ 3 ವಾರಗಳಲ್ಲಿಯೇ 2 ಮಿಲಿಯನ್ ದಾಟಿದೆ. ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರೇಜಿಲ್ ಗಿಂತ ಭಾರತದಲ್ಲಿ 2ನೇ ಮಿಲಿಯನ್ ಸೋಂಕಿತರ ಸಂಖ್ಯೆ ವೇಗವಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!