‘ಹೌಡಿ ಮೋದಿ’ಗೆ ರಾಗಾ ಪ್ರಶ್ನೆ

328

ನವದೆಹಲಿ: ಸೆಪ್ಟೆಂಬರ್ 22ರಂದು ಅಮೆರಿಕಾದ ಟೆಕ್ಸಾಸ್ ನಲ್ಲಿ ಅಧ್ಯಕ್ಷ ಡೂನಾಲ್ಡ್ ಟ್ರಂಪ್ ನೇತೃತ್ವದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಪ್ರಧಾನಿ ಮೋದಿ ಭಾರತೀಯ ಸಮುದಾಯವನ್ನ ಉದ್ದೇಶಿಸಿ ಮಾತ್ನಾಡಲಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ, ವಿಶ್ವಮಟ್ಟದ ಆಡಂಬರದಲ್ಲಿ ದೇಶದ ಆರ್ಥಿಕತೆಯನ್ನ ಮುಚ್ಚಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ಹೌಡಿ ಎಕಾನಮಿ ಡೂಯಿಂಗ್ ಮಿಸ್ಟರ್ ಮೋದಿ? ಎಂದು ಕೇಳುವ ಮೂಲಕ ದೇಶದಲ್ಲಿ ಕುಸಿದಿರುವ ಆರ್ಥಿಕತೆ ಬಗ್ಗೆ ಏನು ಹೇಳ್ತೀರಿ ಎಂದಿದ್ದಾರೆ. ಅಲ್ದೇ, ಕಳೆದ ಜೂನ್ ತಿಂಗಳಿನಿಂದ ಅಂತಾರಾಷ್ಟ್ರೀಯ ಹೂಡಿಕೆದಾರರು 45 ಶತಕೋಟಿ ಡಾಲರ್ ಷೇರು ಮಾರಾಟ ಮಾಡಿದ್ದಾರೆ ಅನ್ನೋದನ್ನ ಈ ವೇಳೆ ಪ್ರಸ್ತಾಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!