84 ವರ್ಷದ ಬಳಿಕ ಮತ್ತೆ ಕಾಣಿಸಿಕೊಂಡ ಅಪರೂಪದ ಹಾವು

443

ಪ್ರಜಾಸ್ತ್ರ ಸುದ್ದಿ

ಉತ್ತರಾಖಂಡ: ಕಳೆದ ಶುಕ್ರವಾರ ಅತಿ ಅಪರೂಪವಾದ ಹಾವೊಂದು ಕಾಣಿಸಿಕೊಂಡಿದೆ. ಕುರ್ರಿಯಖಟ್ಟ ಗ್ರಾಮದ ಮನೆಯೊಂದರಲ್ಲಿ ಹಾವು ಕಾಣಿಸಿಕೊಂಡಿದೆ. ಕವೀಂದ್ರ ಕೊರಂಗ ಎಂಬುವರು ಅರಣ್ಯಇಲಾಖೆಗೆ ಫೋನ್ ಮಾಡಿದ್ದಾರೆ. ಬಳಿಕ ಅದನ್ನು ರಕ್ಷಿಸಿ ಪ್ಲಾಸ್ಟಿಕ್ ಚೀಲದಲ್ಲಿ ಇಡಲಾಗಿತ್ತು.

ಅರಣ್ಯಾಧಿಕಾರಿಗಳು ಇದನ್ನ ನೋಡಿದ್ಮೇಲೆ ಅಪರೂಪದ ಕೆಂಪು ಹವಳದ ಕುಕ್ರಿ ಹಾವು ಅನ್ನೋದು ಗೊತ್ತಾಗಿದೆ. ಇದರ ವೈಜ್ಞಾನಿಕ ಹೆಸರು ಒಲಿಗೊಂಡನ್ ಖೇರಿಯನ್ಸಿಸ್ ಅನ್ನೋದು ಆಗಿದೆ. ಇಲ್ಲಿನ ಗುಖ್ರಾಗಳು ಬಳಸುವ ಆಯುಧದಂತ ಹಲ್ಲುಗಳನ್ನ ಇದು ಹೊಂದಿದೆ. ಹೀಗಾಗಿ ಸ್ಥಳೀಯವಾಗಿ ಕುಕ್ರಿ ಎಂದು ಕರೆಯಲಾಗಿದೆ.

ಕೆಂಪು ಹಳದಿ ಮೈಬಣ್ಣದ ಹಾವು ಈ ಮೊದಲು 1936ರಲ್ಲಿ ಕಾಣಿಸಿಕೊಂಡಿದ್ದ ದಾಖಲೆಯಿದೆ. ಖೇರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ಈ ತರಹದ ಹಾವು ಕಾಣಿಸಿಕೊಂಡಿದ್ದು, 84 ವರ್ಷಗಳ ಬಳಿಕ ಉತ್ತರಾಖಂಡದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿದೆ. ಇದನ್ನ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.




Leave a Reply

Your email address will not be published. Required fields are marked *

error: Content is protected !!