1 ಲಕ್ಷ ಕೋಟಿ ಹಣಕಾಸು ಸೌಲಭ್ಯಕ್ಕೆ ಪ್ರಧಾನಿ ಚಾಲನೆ

317

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೃಷಿ ಮೂಲಭೂತ ಸೌಲಭ್ಯ ನಿಧಿಯಡಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಹಣಕಾಸು ಸೌಲಭ್ಯಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ರು. ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ರು.

ದೇಶದಲ್ಲಿನ ಹಲವು ಭಾಗಗಳಲ್ಲಿನ ರೈತರು ಆನ್ಲೈನ್ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇಳವರಿ ನಂತ್ರದ ನಿರ್ವಹಣೆ ಹಾಗೂ ಸಮುದಾಯ ಕೃಷಿಗೆ ಇದರಿಂದ ಸಹಾಯವಾಗಲಿದೆ. ಕೃಷಿಗೆ ಸಾಲ ನೀಡುವ ಹಲವು ಸಂಸ್ಥೆಗಳ ಮೂಲಕ ಇದರ ಲಾಭ ಪಡೆಯಬಹುದಾಗಿದೆ.

ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್ ಗಳಲ್ಲಿ 11 ಬ್ಯಾಂಕ್ ಗಳು ಈ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಇದರ ಫಲಾನುಭವಿಗಳಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ ಹಾಗೂ 2 ಕೋಟಿ ರೂಪಾಯಿ ವರೆಗಿನ ಸಾಲದ ಗ್ಯಾರೆಂಟಿ ನೀಡಲಾಗುವುದು. ಇದರ ಜೊತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 8.5 ಕೋಟಿ ರೈತರಿಗೆ 6ನೇ ಕಂತಿನ 17 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!