ಸರ್ಕಾರದಲ್ಲಿ ಇಲ್ಲದ ಲಸಿಕೆ, ಖಾಸಗಿಯವರ ಬಳಿ ಹೇಗೆ ಸಿಗುತ್ತಿದೆ?

259

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗಿದೆ. ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ರೀತಿಯ ದರವಿದೆ. ಇದು ಹೇಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಲಸಿಕೆ ವಿಚಾರದಲ್ಲಿಯೂ ಖಾಸಗಿ ಆಸ್ಪತ್ರೆಗಳು ಹಣ ಲೂಟಿ ಹೊಡೆಯುತ್ತಿವೆ. ಒಂದು ಆಸ್ಪತ್ರೆಯಲ್ಲಿ 900 ಇದ್ರೆ ಮತ್ತೊಂದು ಆಸ್ಪತ್ರೆಯಲ್ಲಿ 1250 ರೂಪಾಯಿ ಇದೆ. ಹೀಗಾದ್ರೆ ಬಡವರ ಸ್ಥಿತಿ ಏನು? ಇನ್ನು ಆಮ್ಲಜನ ವಿಚಾರದಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದರು.

ರಾಜ್ಯಕ್ಕೆ ದಿನಕ್ಕೆ 1,750 ಮೆಟ್ರಿಕ್ ಟನ್ ಆಮ್ಲಜನಕ ಬೇಕು. ಆದ್ರೆ, ಬರ್ತಿರುವುದು 1050 ಮೆಟ್ರಿಕ್ ಟನ್. ಹೀಗಾಗಿ 700 ಮೆಟ್ರಿಕ್ ಟನ್ ಕೊರತೆಯಿದೆ. ಇದೆಲ್ಲದರ ನಡುವೆ ಬ್ಲಾಕ್ ಫಂಗಸ್ ನಿಂದಾಗಿ ನಮ್ಮ ಪರಿಚಿತರೊಬ್ಬರಿಗೆ ಇಂಜಕ್ಷನ್ ಬೇಕಿತ್ತು. ಸುಧಾಕರ, ಆರ್.ಅಶೋಕ, ಖಾಸಗಿಯವರೆಗೂ ಫೋನ್ ಮಾಡಿದೆ. ದಿನಕ್ಕೆ 4 ಇಂಜಕ್ಷನ್ ಬೇಕು. ನಾನೇ ಪರದಾಡಿದೆ. ಇನ್ನು ಜನ ಸಾಮಾನ್ಯರ ಗತಿಯೇನು ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ರು.




Leave a Reply

Your email address will not be published. Required fields are marked *

error: Content is protected !!