19 ವರ್ಷಗಳ ಹಿಂದಿನ ಪ್ರಕರಣದಲ್ಲಿ ಗಾಯಕನಿಗೆ ಶಿಕ್ಷೆ

177

ಪ್ರಜಾಸ್ತ್ರ ಸುದ್ದಿ

ಚಂಡೀಗಡ್: ಅಕ್ರಮ ಮಾನವ ಸಾಗಾಣಿಕೆ ಪ್ರಕರಣ ಸಂಬಂಧ ಪಂಜಾಬ್ ಗಾಯಕ ದಲೆರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆಯನ್ನು ಪಟಿಯಾಲ್ ಕೋರ್ಟ್ ಗುರುವಾರ ವಿಧಿಸಿದೆ. ಕೆಳಗಿನ ಕೋರ್ಟ್ ತೀರ್ಪನ್ನು ಪಟಿಯಾಲ್ ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ.

ಫಿಜನ್ ಪೆಲ್ಟಿಂಗ್ ಮ್ಯೂಸಿಕ್ ತಂಡಗಳ ಮೂಲಕ ಅಮೆರಿಕಾಕ್ಕೆ ಅಕ್ರಮ ಮಾನವ ಕಳ್ಳಸಾಗಾಣಿಕೆ ನಡೆಸಲಾಗುತ್ತಿದೆ ಎಂದು ದಲೆರ್ ಅಣ್ಣ ಶಂಶೇರ್ ಮೆಹಂದಿ ಮೇಲೆ ಪ್ರಕರಣ ದಾಖಲಾಗಿತ್ತು. ನಂತರ ದಲೆರ್ ಹೆಸರು ಕೇಳಿ ಬಂದಿತು. ಹೀಗಾಗಿ 7 ಮಂದಿ ವಿರುದ್ಧ 2003ರಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ 2018ರಲ್ಲಿ ಪಟಿಯಾಲ್ ಟ್ರಯಲ್ ಕೋರ್ಟ್ 2 ವರ್ಷ ಶಿಕ್ಷೆ ಪ್ರಕಟಿಸಿತ್ತು. ನಂತರ ಬೇಲ್ ಪಡೆದು ಹೊರ ಬಂದಿದ್ದ ದಲೆರ್ ಬಿಜೆಪಿ ಸೇರಿದ್ದರು, ಟ್ರಯಲ್ ತೀರ್ಪು ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೀಗ ಸೆಷನ್ಸ್ ಕೋರ್ಟ್, ಟ್ರಯಲ್ ಕೋರ್ಟ್ ತೀರ್ಪು ಎತ್ತಿ ಹಿಡಿದಿದೆ.




Leave a Reply

Your email address will not be published. Required fields are marked *

error: Content is protected !!