ಕರಾವಳಿಯಲ್ಲಿ ಚಂಡಮಾರುತದ ಭಯ: ನಾಡಿಗೆ ಮತ್ತೆ ಸಂಕಷ್ಟ

361

ಬೆಂಗಳೂರು: ರಾಜ್ಯದ ತುಂಬಾ ಮಳೆಯ ಆಟ ಜೋರಾಗಿಯೇ ಇದೆ. ಇದ್ರಿಂದಾಗಿ ಜನರು ಸಾಕಷ್ಟು ಹೈರಾಣಾಗ್ತಿದ್ದಾರೆ. ಇದರ ನಡುವೆ ಕರ್ನಾಟಕಕ್ಕೆ ಇದೀಗ ಮತ್ತೊಂದು ಸಂಕಟ ಎದುರಾಗುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಚಂಡಮಾರುತದ ಭಯ ಸೃಷ್ಟಿಯಾಗಿದೆ.

ನವೆಂಬರ್ 6 ಮತ್ತು 7ರಂದು ಈ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಜರಾತ್, ಮಹಾರಾಷ್ಟ್ರ, ದಿಯು-ದಮನ್ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಚಂಡಮಾರುತ ಎಂಟ್ರಿಯಾಗಲಿದೆಯಂತೆ. ಗುಜರಾತನಲ್ಲಿ ಗಂಟೆಗೆ 40ರಿಂದ 60, ಮಹಾರಾಷ್ಟ್ರದಲ್ಲಿ 50ರಿಂದ 60 ಇದ್ದರೆ ಕರಾವಳಿ ಭಾಗದಲ್ಲಿ ಇದರ ಮೂರು ಪಟ್ಟು ಹೆಚ್ಚಿರಲಿದ್ದು 175ರಿಂದ 185ರ ವೇಗದಲ್ಲಿ ಚಂಡಮಾರುತ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದರ ಎಫೆಕ್ಟ್ ಕರ್ನಾಟಕದ ಇತರೆ ಭಾಗಗಳಲ್ಲಿಯೂ ಆಗಲಿದೆ. ಸೋಮವಾರ ರಾತ್ರಿಯಿಂದಲೇ ಉತ್ತರ ಕರ್ನಾಟಕ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ವಿಜಯಪುರ, ಬಾಗಲಕೋಟೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಭರ್ಜರಿ ಗುಡುಗು ಸಹಿತಿ ಭಾರೀ ಮಳೆಯಾಗಿದೆ. ಇದು ಇನ್ನು ಎರಡು ದಿನ ಮುಂದುವರೆಯಲಿದ್ದು, ಎಚ್ಚರಿಕೆ ನೀಡಲಾಗಿದೆ.




2 thoughts on “ಕರಾವಳಿಯಲ್ಲಿ ಚಂಡಮಾರುತದ ಭಯ: ನಾಡಿಗೆ ಮತ್ತೆ ಸಂಕಷ್ಟ

  1. aneelkumar halladamath

    ಸರ್ ನಿಮ್ಮ ಪ್ರಜಾಸ್ತ್ರ Digital Media ನನಗೆ ತುಂಬಾ ಇಷ್ಟವಾಗಿದೆ ಪ್ರಜಾಸ್ತ್ರ ಗುಂಪಿಗೆ ನನ್ನದೊಂದು ಅಭಿನಂದನೆಗಳು🙏🙏

    Reply

Leave a Reply

Your email address will not be published. Required fields are marked *

error: Content is protected !!