ನಾನು ಇನ್ನು ನಿವೃತ್ತಿ ಘೋಷಿಸಿಲ್ಲ: ಕ್ರಿಸ್ ಗೇಲ್

460

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ನಾಕೌಟ್ ಹಂತದ ಕೊನೆಯ ಪಂದ್ಯವಾಡಿದ ವೆಸ್ಟ್ ಇಂಡೀಸ್ ಶನಿವಾರ ಆಡಿತು. ಈ ವೇಳೆ ಕ್ರಿಸ್ ಗೇಲ್ ಇದು ತಮ್ಮ ಕೊನೆಯ ಪಂದ್ಯ ಎನ್ನುವಂತೆ ಆಟವಾಡಿದ್ದರು. 9 ಎಸೆತಗಳಲ್ಲಿ 15 ರನ್ ಗಳಿಸಿ ಔಟ್ ಆದ ಗೇಲ್, ಬ್ಯಾಟ್ ಬೀಸಿ ಹೊರ ನಡೆದರು. ಇತರೆ ಆಟಗಾರರು ಅಭಿನಂದಿಸಿದರು.

ಗೇಲ್ ಈ ರೀತಿ ನಡೆದುಕೊಂಡದನ್ನು ವಿದಾಯ ಎಂದು ಹೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ರಿಸ್ ಗೇಲ್ ನಾನು ಇನ್ನು ವಿದಾಯ ಹೇಳಿಲ್ಲ. ನನ್ನ ತವರು ಊರು ಜಮೈಕಾದಲ್ಲಿ ಕೊನೆಯ ಪಂದ್ಯ ಆಡಲು ಇಷ್ಟ ಪಡುತ್ತೇನೆ ಎಂದಿದ್ದಾರೆ.

ನಾನು ಇನ್ನು ವಿಶ್ವಕಪ್ ಆಡಲು ಬಯಸುತ್ತೇನೆ. ಆದರೆ, ಅವಕಾಶ ನೀಡುತ್ತಾರೆ ಎಂದು ಗೊತ್ತಿಲ್ಲ. ತವರು ಅಭಿಮಾನಿಗಳ ಎದುರು ಕೊನೆಯ ಪಂದ್ಯ ಆಡಲು ಅವಕಾಶ ನೀಡಿದರೆ ಸಾಕು ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!