ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಲ್ಲಿ ಇಂದು ಎಸ್ಎಸ್ಎಲ್ ಸಿಯ ಮೊದಲ ಪೂರಕ ಪರೀಕ್ಷೆ ನಡೆಯಿತು. ಎಚ್.ಜಿ ಹೈಸ್ಕೂಲ್ ಹಾಗೂ ಅಂಜುಮಾನ್ ಕಾಲೇಜುಗಳ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಇಡೀ ತಾಲೂಕಿನಲ್ಲಿ 98 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಮೊದಲ ದಿನದ ವಿಜ್ಞಾನ ಪರೀಕ್ಷೆಗೆ 76 ವಿದ್ಯಾರ್ಥಿಗಳು ಹಾಜರಿದ್ದರು. 22 ವಿದ್ಯಾರ್ಥಿಗಳು ಗೈರಾಗಿದ್ದರು.