ಕನಕದಾಸರ ಕುರಿತು ಈ ಹಿಂದೆ ಇರುವ ಹಾಗೆ ಪ್ರಕಟಿಸಲು ಸಿಎಂ ಸೂಚನೆ

373

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಂದಭರ್ದಲ್ಲಿ ದಾಸ ಶ್ರೇಷ್ಠ ಕನಕದಾಸರ ಕುರಿತು 9ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ಪಾಠದಲ್ಲಿ ಕಡೆಗಣಿಸಿರುವ ವಿಚಾರದ ಕುರಿತು, ಸಿಎಂ ಬೊಮ್ಮಾಯಿ ಅವರಿಗೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಕುರಿತು ಸಿಎಂ ಬೊಮ್ಮಾಯಿ ಅವರು ಮನವಿ ಪತ್ರದಲ್ಲೇ, ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆ ಈ ಹಿಂದೆ ಇದ್ದ ಹಾಗೆ ಪ್ರಕಟಣೆ ಮಾಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಮಾಡಿದ ಯಡವಟ್ಟುಗಳು ಸಿಎಂ ಬೊಮ್ಮಾಯಿಗೆ ಸಂಕಷ್ಟ ತಂದೊಡ್ಡಿವೆ.

ಶಾಲಾ ವಿದ್ಯಾರ್ಥಿಗಳು ಭವಿಷ್ಯದ ವಿಚಾರದಲ್ಲಿ ಏನೂ ಗೊತ್ತಿಲ್ಲದ ರೋಹಿತ್ ಚಕ್ರತೀರ್ಥ ಅನ್ನೋ ವ್ಯಕ್ತಿಯನ್ನು ತೆಗೆದುಕೊಂಡು ಬಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿಸಿದ ಪರಿಣಾಮ ನೂರೆಂಟು ತಪ್ಪುಗಳು, ಅವಮಾನ ಮಾಡಲಾಗಿದೆ. ಆತ ಮಾಡಿದ ತಿರುಚುವ ಹಾಗೂ ಕುತಂತ್ರದ ನಡೆಯನ್ನು ಸ್ವಾಮೀಜಿಗಳಾದಿಯಾಗಿ ಎಲ್ಲರೂ ಖಂಡಿಸುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಸಿಎಂ ಬೊಮ್ಮಾಯಿಯವರ ಮೇಲಾಗುತ್ತಿದೆ. ಎಲ್ಲ ಸಮುದಾಯಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿಯಿಂದ ಬಚಾವ್ ಆಗಲು ಪಠ್ಯಪಸ್ತಕಗಳಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದೇ ಆಗಿದೆ. ಇದು ಮಕ್ಕಳ ಶಿಕ್ಷಣದ ಮೇಲೂ ಆಗುತ್ತಿರುವುದು ನಿಜಕ್ಕೂ ದುರಂತವೇ ಸರಿ.




Leave a Reply

Your email address will not be published. Required fields are marked *

error: Content is protected !!