ಭಾರತಕ್ಕೆ 273 ರನ್ ಗಳ ಗುರಿ ನೀಡಿದ ಅಫ್ಘನ್

212

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಇಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಸಿಸಿ ವರ್ಲ್ಡ್ ಕಪ್ 2023 ಟೂರ್ನಿಯ 9ನೇ ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ನಡೆಯುತ್ತಿದೆ. ಟಾಸ್ ಗೆದ್ದ ಅಫ್ಘನ್ ನಾಯಕ ಶಹಿದಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಲಿಷ್ಠ ಟೀಂ ಇಂಡಿಯಾದ ಬೌಲರ್ ಗಳನ್ನು ಎದುರಿಸಿ ಉತ್ತಮ ಸ್ಕೋರ್ ಗಳಿಸಿದೆ.

ನಾಯಕ ಹಸ್ಮತುಲ್ಲಾ ಶಹದಿ 80, ಅಜ್ಮುತುಲಾ ಓಮರ್ಝಿ 62, ಇಬ್ರಾಹಿಂ ಝಾರ್ಡನ್ 22 ರನ್ ಗಳ ಆಟದಿಂದಾಗಿ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ.

ಭಾರತದ ಪರ ಜಸ್ಪ್ರೀತ್ ಬೂಮ್ರಾ ಭರ್ಜರಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯೆ 2, ಠಾಕೂರ್, ಯಾದವ್ ತಲಾ 1 ವಿಕೆಟ್ ಪಡೆದರು. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಬ್ಲೂ ಬಾಯ್ಸ್ ಆಟ ನೋಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!