ಮೂರೂ ಮಾದರಿ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಂಬರ್ 1

170

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ ಗೆದ್ದು ಜೋಶ್ ನಲ್ಲಿರುವ ಟೀಂ ಇಂಡಿಯಾ ಇದೀಗ ಆಸೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇದರೊಂದಿಗೆ ಐಸಿಸಿ ರ್ಯಾಕಿಂಗ್ ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದಿದೆ.

ಟೆಸ್ಟ್, ಟಿ-20 ಹಾಗೂ ಏಕದಿನ ಹೀಗೆ ಮೂರೂ ಮಾದರಿಯಲ್ಲಿ ನಂಬರ್ 1 ಸ್ಥಾನವನ್ನು ಭಾರತ ಅಲಂಕರಿಸಿದೆ. ಈ ಸಾಧನೆ ಮಾಡಿದ 2ನೇ ದೇಶವಾಗಿದೆ. 2014ರಲ್ಲಿ ಸೌಥ್ ಆಫ್ರಿಕಾ ತಂಡ ಎಲ್ಲ ಮಾದರಿಯಲ್ಲಿ ನಂಬರ್ 1 ಸ್ಥಾನ ಪಡೆದಿತ್ತು.

ಏಕದಿನ ಮಾದರಿಯಲ್ಲಿ ಭಾರತ ಮೊದಲ ಸ್ಥಾನ, ಪಾಕಿಸ್ತಾನ 2, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿವೆ. ಟೆಸ್ಟ್ ಮಾದರಿಯಲ್ಲಿ ಭಾರತ ಮೊದಲು, ಆಸ್ಟ್ರೇಲಿಯಾ 2, ಇಂಗ್ಲೆಂಡ್ 3ನೇ ಸ್ಥಾನದಲ್ಲಿವೆ. ಟಿ-20 ಮಾದರಿಯಲ್ಲಿ ಟೀಂ ಇಂಡಿಯಾ ಫಸ್ಟ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ 2, 3ನೇ ಸ್ಥಾನದಲ್ಲಿವೆ.




Leave a Reply

Your email address will not be published. Required fields are marked *

error: Content is protected !!