ಶಶಿಕಲಾಗೆ ಸೇರಿದ 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

358

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಮಾಜಿ ಸಿಎಂ, ದಿವಂಗತ ಜೆ.ಜಯಲಲಿತಾ ಆಪ್ತೆ ಶಶಿಕಲಾಗೆ ಸೇರಿದ ಬರೋಬ್ಬರಿ 2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನ ಇಂದು ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೇನಾಮಿ ಆಸ್ತಿ ತಡೆ ಕಾಯ್ದೆ ಅಡಿಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

ಸಿರುಥಾವೂರ್, ಕೊಡನಾಡುವಿನಲ್ಲಿ 300 ಕೋಟಿ ಸೇರಿದಂತೆ ಶಶಿಕಲಾ, ಪತಿ ನಟರಾಜನ್, ಇಳವರಸಿ, ಸುಧಾಕರನ್ ಸೇರಿದಂತೆ ಹಲವರು ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಐಟಿ ಇಲಾಖೆ ಆಸ್ತಿ ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿರುವ ನೋಟಿಸ್ ನೀಡಿದೆ.

ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಿರುವ ಶಶಿಕಲಾ 4 ವರ್ಷಗಳ ಶಿಕ್ಷೆ ಬಳಿಕ ವಾಪಸ್ ಬಂದು ಉಳಿದುಕೊಳ್ಳಬೇಕು ಎಂದುಕೊಂಡಿದ್ದ ಬಂಗಲೆ ಸಹ ಜಪ್ತಿ ಮಾಡಲಾಗಿದೆಯಂತೆ. 2017ರಲ್ಲಿ ಸಹ 1,500 ಕೋಟಿ ರೂಪಾಯಿ ತೆರಿಗೆ ವಂಚನೆ ಪತ್ತೆಯಾಗಿತ್ತು.




Leave a Reply

Your email address will not be published. Required fields are marked *

error: Content is protected !!