ಧೋನಿ, ಕಾರ್ತಿಕ ಟೀಂ ಫೈಟ್

228

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಫೈಟ್ ನಡೆಯಲಿದೆ. ಧೋನಿ ಹಾಗೂ ಕಾರ್ತಿಕ ಟೀಂ ನಡುವಿನ ಕದನ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತಂಡಗಳ ಪಾಯಿಂಟ್ಸ್ ನೋಡಿದ್ರೆ ಚೆನ್ನೈ 5 ಪಂದ್ಯದಲ್ಲಿ 3 ಸೋತು, 2ರಲ್ಲಿ ಗೆಲುವು ದಾಖಲಿಸಿ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಕೆಕೆಆರ್ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಾಣುವ ಮೂಲಕ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ 10 ವಿಕೆಟ್ ಅಂತರದಿಂದ ಗೆದ್ದು ಜೋಶ್ ನಲ್ಲಿರುವ ಸಿಎಸ್ಕೆ ಇಂದಿನ ಪಂದ್ಯವನ್ನ ಗೆದ್ದು 4ನೇ ಸ್ಥಾನಕ್ಕೆ ಸಿಗುತ್ತಾ, ಕೆಕೆಆರ್ 3ನೇ ಸ್ಥಾನಕ್ಕೆ ಹೋಗುತ್ತಾ ಅನ್ನೋ ಕುತೂಹಲ ಮೂಡಿದೆ.

ಇನ್ನು ಕೆಕೆಆರ್ ಕ್ಯಾಪ್ಟನ್ ದಿನೇಶ ಕಾರ್ತಿಕ ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!