ವಿರೋಧದ ಬಳಿಕ ಮಾಸ್ಕ್ ದಂಡ ಇಳಿಕೆ

285

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಸ್ಕ್ ಧರಿಸದೆ ಹೊರಗಡೆ ಓಡಾಡುವುದು ಕಂಡು ಬಂದ್ರೆ ಅಂತವರಿಗೆ ಬರೋಬ್ಬರಿ 1000 ಸಾವಿರ ರೂಪಾಯಿ ದಂಡ ವಿಧಿಸಲಾಗ್ತಿತ್ತು. ಗ್ರಾಮ ಪ್ರದೇಶದಲ್ಲಿ 500 ರೂಪಾಯಿ ಇತ್ತು. ಇದಕ್ಕೆ ಎಲ್ಲಡೆಯಿಂದ ಭಾರಿ ವಿರೋಧ ವ್ಯಕ್ತವಾಯ್ತು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಯಾದ ಪರಿಣಾಮ, ಇದೀಗ ಸರ್ಕಾರ ದಂಡವನ್ನ ಶೇಕಡ 75ರಷ್ಟು ಇಳಿಸಿದೆ.

ನಗರ ಪ್ರದೇಶದಲ್ಲಿ 250 ರೂಪಾಯಿ ಹಾಗೂ ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ ವಿಧಿಸಲು ಹೊಸ ಆದೇಶವನ್ನ ಸಿಎಂ ಬಿ.ಎಸ್ ಯಡಿಯೂರಪ್ಪನವರು ನೀಡಿದ್ದಾರೆ. ಕೋವಿಡ್ ಗೆ ಲಸಿಕೆ ಕಂಡು ಹಿಡಿಯುವ ತನಕ ಮಾಸ್ಕ್, ಸ್ಯಾನ್ ಟೈಸರ್, ಸಾಮಾಜಿಕ ಅಂತರ ಅಗತ್ಯವಾಗಿದೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!