ರಾಜ್ಯದಲ್ಲಿಂದು 10,947 ಜನರಲ್ಲಿ ಕರೋನಾ ಸೋಂಕು

250

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 10,947 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 6,68,652 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇಂದು 9,832 ಜನರು ಇಂದು ಗುಣಮುಖರಾಗಿದ್ದು, 5,42,906 ಜನರು ಚೇತರಿಸಿಕೊಂಡಿದ್ದಾರೆ.

ಇಂದು 113 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ 9,574 ಜನರು ಮೃತಪಟ್ಟಿದ್ದಾರೆ. 841 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 121, ಬಳ್ಳಾರಿ 258, ಬೆಳಗಾವಿ 186, ಬೆಂ.ಗ್ರಾ 189, ಬೆಂ.ನ 5000, ಬೀದರ 57, ಚಾಮರಾಜನಗರ 104, ಚಿಕ್ಕಬಳ್ಳಾಪುರ 115, ಚಿಕ್ಕಮಗಳೂರು 186, ಚಿತ್ರದುರ್ಗ 217, ದ.ಕ 447, ದಾವಣಗೆರೆ 141, ಧಾರವಾಡ 154, ಗದಗ 72, ಹಾಸನ 471, ಹಾವೇರಿ 57, ಕಲಬುರಗಿ 180, ಕೊಡಗು 103, ಕೋಲಾರ 104, ಕೊಪ್ಪಳ 98, ಮಂಡ್ಯ 207, ಮೈಸೂರು 979, ರಾಯಚೂರು 129, ರಾಮನಗರ 77, ಶಿವಮೊಗ್ಗ 203, ತುಮಕೂರು 250, ಉಡುಪಿ 209, ಉ.ಕ 462, ವಿಜಯಪುರ 73, ಯಾದಗಿರಿ 98 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!