ಆಸೀಸ್ ಮಣಿಸಿದ ಟೀಂ ಇಂಡಿಯಾ

259

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ 4 ಟೆಸ್ಟ್ ಪಂದ್ಯಗಳಲ್ಲಿ ಸರಣಿಯಲ್ಲಿ ಇದೀಗ 1-1 ಸಮಬಲ ಸಾಧಿಸಲಾಗಿದೆ.

ಆಸೀಸ್ ಪರ ವಾಡೆ 40, ಗ್ರೀನ್ 45 ರನ್ ಗಳಿಂದಾಗಿ 200 ರನ್ ಗಳಿಸಿತು. ಇದರಿಂದಾಗಿ ಭಾರತಕ್ಕೆ 70ರನ್ ಗಳ ಅಲ್ಪ ಟಾರ್ಗೆಟ್ ನೀಡಲಾಗಿತ್ತು. ಭಾರತ ಪರ ಸಿರಾಜ್ 3, ಅಶ್ವಿನ್, ಜಡೇಜಾ, ಬೂಮ್ರಾ ತಲಾ 2 ವಿಕೆಟ್ ಪಡೆದು ಮಿಂಚಿದ್ರು. ಉಮೇಶ ಯಾದವ 1 ವಿಕೆಟ್ ಪಡೆದ.

ಸಾಧಾರಣ ಗುರಿ ಬೆನ್ನು ಹತ್ತಿದ ಭಾರತಕ್ಕೆ ಮತ್ತೆ ಆರಂಭಿಕ ಆಘಾತವಾಯ್ತು. ಮಯಾಂಕ್ 5ರನ್ ಗೆ, ಪೂಜಾರ 3ರನ್ ಗೆ ಔಟ್ ಆದ್ರು. ಮುಂದೆ ಶುಭನಂ ಗಿಲ್ 35 ಹಾಗೂ ಕ್ಯಾಪ್ಟನ್ ರಹಾನೆ 27ರನ್ ಬಾರಿಸಿ ಗೆಲುವಿನ ದಡ ಸೇರಿಸಿದ್ರು.

ಆಸೀಸ್ ಪರ ಸ್ಟ್ರಾರ್ಕ್ ಹಾಗೂ ಕಮಿನ್ಸ್ ತಲಾ ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!