2-1 ಅಂತರದಿಂದ ಸರಣಿ ಗೆದ್ದ ಭಾರತ

241

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್ ಗಳಿಂದ ಸೋತಿದೆ. ಆಸೀಸ್ ನೀಡಿದ್ದ 186 ರನ್ ಗಳಿಸುವಲ್ಲಿ ಯಡವಿದ ಭಾರತ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಸೋಲು ಅನುಭವಿಸಿತು. ಇದರೊಂದಿಗೆ 2-1 ಅಂತರದಿಂದ ಸರಣಿ ಗೆದ್ದಿದೆ.

ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ವಾಡೆ ಭರ್ಜರಿ 80 ಹಾಗೂ ಮ್ಯಾಕ್ಸ್ ವೆಲ್  54 ರನ್ ಗಳ ಆಟವಾಡಿದ್ರು. ಕ್ಯಾಪ್ಟನ್ ಪಿಂಚ್ 0, ಸ್ಮಿತ್ 24, ಹೆನ್ರಿಕಿಸ್ 5, ಶಾರ್ಟ್ 7, ಸಮ್ಸ್ 4 ರನ್ ಗಳಿಸಿದ್ರು. ಹೀಗಾಗಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದ್ರು. ಭಾರತ ಪರ ವಾಸಿಂಗ್ಟನ್ ಸುಂದರ 2, ನಟರಾಜನ್ ಹಾಗೂ ಠಾಕೂರ್ ತಲಾ 1 ವಿಕೆಟ್ ಪಡೆದ್ರು.

186 ಸ್ಕೋರ್ ಚೇಜ್ ಮಾಡಿದ ಭಾರತಕ್ಕೆ ಆರಂಭದಲ್ಲಿ ಆಘಾತವಾಯ್ತು. ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಕೆ.ಎಲ್ ರಾಹುಲ 2ನೇ ಬೌಲಿಗೆ ಔಟ್ ಆಗಿ ಹೊರ ನಡೆದ. ನಂತರ ಬಂದ ಕೊಹ್ಲಿ ಹಾಗೂ ಧವನ್ 74 ರನ್ ಜೊತೆಯಾಟವಾಡಿ ಒಂದಿಷ್ಟು ಭರವಸೆ ಮೂಡಿಸಿದ್ರು. ಸಮ್ಸ್ ಬೌಲಿಂಗ್ ನಲ್ಲಿ 28 ರನ್ ಗೆ ಧವನ್ ಔಟ್ ಆದ.

ಒಂದ್ಕಡೆ ಕೊಹ್ಲಿ ಭರ್ಜರಿ ಆಟವಾಡ್ತಿದ್ರೆ ಇನ್ನೊಂದು ಕಡೆ ವಿಕೆಟ್ ಬೀಳ್ತಿದ್ವು. 85 ರನ್ ಗಳಿಸಿ ಆಡ್ತಿದ್ದ ಕೊಹ್ಲಿ ಸಮ್ಸ್ ಬೌಲಿಂಗ್ ನಲ್ಲಿ ಔಟ್ ಆದ. ಸ್ಯಾಮ್ ಸನ್ 10, ಶ್ರೇಯಸ ಅಯ್ಯರ 0,  ಪಾಂಡೆ 20, ವಾಸಿಂಗ್ಟನ್ ಸುಂದರ 7, ಠಾಕೂರ್ 17 ರನ್ ಗಳಿಸಿದ್ರು. ಹೀಗಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಸೋಲು ಅನುಭವಿಸಿತು.

ಆಸೀಸ್ ಪರ ಸ್ವೆಪ್ಸನ್ 3, ಮ್ಯಾಕ್ಸ್ ವೆಲ್, ಅಬೌಟ್, ಟೈ, ಜಂಪಾ ತಲಾ 1 ವಿಕೆಟ್ ಪಡೆದ್ರು. 3 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಸರಣಿಯನ್ನ ವಶ ಪಡಿಸಿಕೊಂಡಿತು. ಇದರೊಂದಿಗೆ ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!