100ನೇ ಟೆಸ್ಟ್ 200 ರನ್.. ಜೋ ರೂಟ್ ವಿಶ್ವ ದಾಖಲೆ..

275

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್ ದ್ವಿಶತಕ ಸಿಡಿಸಿದ್ದಾರೆ. ಈ ಪಂದ್ಯ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. ಇದರಲ್ಲಿ ದ್ವಿಶತಕ ಸಿಡಿಸಿದ್ದು ಹೊಸ ಸಾಧನೆಯಾಗಿದೆ.

100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 11ನೇ ಆಟಗಾರನಾಗಿ ಹಾಗೂ ಇಂಗ್ಲೆಂಡ್ ನ 2ನೇ ಆಟಗಾರನಾಗಿ ಜೋ ರೂಡ್ ದಾಖಲೆ ಬರೆದ್ರು. ಇನ್ನು 98, 99 ಹಾಗೂ 100 ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರನಾದ್ರು. ಶತಕ ಮುಂದುವರೆದ ಆಡ್ತಿರುವ ಜೋ ರೂಡ್ 214 ರನ್ ಗಳೊಂದಿಗೆ ಆಡ್ತಿದ್ದಾರೆ. ಇದು ಸಹ ವಿಶ್ವ ದಾಖಲೆಯ ಪಟ್ಟಿಗೆ ಸೇರಿತು. 2005ರಲ್ಲಿ ಭಾರತದ ವಿರುದ್ಧ ಪಾಕ್ ಆಟಗಾರ ಇಂಜುಮಾಮ್ ಉಲ್ ಉಕ್ 184 ರನ್ ಅಧಿಕ ಸ್ಕೋರ್ ಆಗಿತ್ತು. ಇದನ್ನ ರೂಟ್ ಸರಿಗಟ್ಟಿದ್ರು.

2 ದಿನದ 3ನೇ ವಿರಾಮದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 469 ರನ್ ಗಳಿಸಿ ಆಡುತ್ತಿದೆ. ಜೋ ರೂಟ್ ಗೆ ಒಲ್ಲೆ ಪೋಪ್(33) ಸಾಥ್ ನೀಡಿದ್ದಾರೆ. ಭಾರತ ಪರ ಬೂಮ್ರಾ 2, ಅಶ್ವಿನ್ ಹಾಗೂ ನದೀಪ್ ತಲಾ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!