ಭಾರತದ ಗೆಲುವು ಕಸೆದ ರೂಟ್-ಬೆಸ್ಟೋ ಶತಕದಾಟ

289

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ಭಾರತಕ್ಕೆ ಸೋಲಾಗಿದೆ. ಜೋ ರೂಟ್ ಹಾಗೂ ಜಾನಿ ಬೆಸ್ಟೋ ಅದ್ಭುತ್ ಆಟದಿಂದಾಗಿ ಇಂಗ್ಲೆಂಡ್ ಪಡೆ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ 5 ಟೆಸ್ಟ್ ಸರಣಿಯಲ್ಲಿ 2-2ರ ಮೂಲಕ ಸಮಬಲ ಸಾಧಿಸಿದವು.

ರೂಟ್ 142, ಬೆಸ್ಟೋ 114 ರನ್ ಗಳ ಭರ್ಜರಿ ಶತಕದ ಜೊತೆಯಾಟದಿಂದಾಗಿ 3 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಭಾರತದ ಸರಣಿಗೆ ಗೆಲುವಿನ ಕನಸಿಗೆ ತಣ್ಣೀರು ಎರೆಚಿದರು. ಅಲೆಕ್ಸ್ ಲೀಸ್ 56, ಜ್ಯಾಕ್ ಕ್ರಾಲಿ 46 ರನ್ ಗಳ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಒಲಿ ಪೋಪ್ ಡಕ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 416, ಎರಡನೇ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 284, ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 378 ರನ್ ಗಳ ಟಾರ್ಗೆಟ್ ಮುಟ್ಟಿ ಗೆಲುವು ಸಾಧಿಸಿತು. ಭಾರತದ ಹಂಗಾಮಿ ನಾಯಕ ಬೂಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. 5 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದು, 64ಕ್ಕೆ 5 ವಿಕೆಟ್ ಪಡೆದಿದ್ದು ಉತ್ತಮ ಸಾಧನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!