ಮತ್ತೊಂದು ‘ಸೂಪರ್’ ಗೆಲುವು

327

ವೆಲಿಂಗ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 4ನೇ ಪಂದ್ಯವೂ ಸಹ ಕೊನೆಯ ತನಕ ರೋಚಕತೆಯಿಂದ ಕೂಡಿತ್ತು. 3ನೇ ಮ್ಯಾಚಿನಂತೆ ಇದು ಸಹ ಸೂಪರ್ ಓವರ್ ಗೆ ಬಂದು ನಿಲ್ಲುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಮತ್ತಷ್ಟು ಕಿಕ್ ನೀಡಿತು. ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ಗೆ ಲಕ್ ಇರ್ಲಿಲ್ಲ.

ಮೊದಲು ಬ್ಯಾಟ್ ಮಾಡಿದ ಭಾರತ, ಮನೀಷ ಪಾಂಡೆ 50 ನಾಟೌಟ್ ಹಾಗೂ ಕೆ.ಎಲ್ ರಾಹುಲ 39 ರನ್ ಹೊರತಾಗಿ ಯಾರೂ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಇರ್ಲಿಲ್ಲ. ಸಂಜು ಸ್ಯಾಮನ್ 8, ಕೊಹ್ಲಿ 11, ಶ್ರೇಯಸ ಅಯ್ಯರ 1, ಶಿವಂ ದುಬೆ 12, ವಾಸಿಂಗ್ಟನ್ ಸುಂದರ 0, ಶ್ರಾದ್ಧೂಲ ಠಾಕೂರ್ 20, ಚಹಾಲ್ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಸೈನಿ 11 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು. ಹೀಗಾಗಿ 165 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು 166 ರನ್ ಗಳ ಟಾರ್ಗೆಟ್ ನೀಡಿತು. ನ್ಯೂಜಿಲೆಂಡ್ ಪರ ಸೌದಿ 3, ಬೆನೆಟ್ 2, ಸೌಥಿ, ಸ್ಕಾಟ್, ಸ್ಟನ್ನರ್ ತಲಾ 1 ವಿಕೆಟ್ ಪಡೆದ್ರು.

166 ರನ್ ಗುರಿ ಬೆನ್ನತ್ತಿದ ಕಿವೀಸ್ ಪಡೆ ಕಾಲಿನ್ ಮುನ್ರೋ ಭರ್ಜರಿ 64 ಹಾಗೂ ಸೈಫರ್ಟ್ 57 ರನ್ ಗಳ ಆಟದಿಂದ ನ್ಯೂಜಿಲೆಂಡ್ ಗೆಲ್ಲುವ ಹಂತದಲ್ಲಿ ಬಂದು ಮತ್ತೆ ಯಡವಿತು. ರಾಸ್ ಟೇಲರ್ 24 ರನ್ ಬಾರಿಸಿದ್ರು. ಸೈಫರ್ಟ್ ಹಾಗೂ ಟೇಲರ್ ಜೋಡಿ ಭರ್ಜರಿಯಾಗಿ ಆಡುವ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಯಡವಿದ್ರು. 159 ರನ್ 4 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 165 ಕ್ಕೆ 7 ವಿಕೆಟ್ ಕಳೆದುಕೊಂಡು ಮತ್ತೆ ಪಂದ್ಯ ಟೈ ಆಯ್ತು.

ಸೂಪರ್ ಓವರ್ ನಲ್ಲಿ ಸೈಫರ್ಟ್ 8 ಹಾಗೂ ಮುನ್ರೋ 5 ರನ್ ಗಳ ಜೊತೆಯಾಟದಿಂದ 13 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಭಾರತಕ್ಕೆ 14 ರನ್ ಟಾರ್ಗೆಟ್ ನೀಡಿತು. ಬಳಿಕ ಕೆ.ಎಲ್ ರಾಹುಲ ಹಾಗೂ ವಿರಾಟ ಕೊಹ್ಲಿ ಮೈದಾನಕ್ಕೆ ಬಂದ್ರು. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಬೌಲರ್ ಸೌಥ್ ಟೀಂ ಲೀಡ್ ಮಾಡಿದ್ರು. ಕಳೆದ ಪಂದ್ಯದ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದ್ದ ಸೌಥಿ ಇವತ್ತು ಬೌಲಿಂಗ್ ಮಾಡಿದ್ರು. ಮೊದಲ ಎಸೆತವನ್ನೇ ರಾಹುಲ ಸಿಕ್ಸ್ ಎತ್ತಿದ. 2ನೇ ಬೌಲ್ ಫೋರ್ ಬಾರಿಸಿದ. 3ನೇ ಬೌಲ್ ನಲ್ಲಿ ಔಟ್ ಆದ. ಬಳಿಕ ಕೊಹ್ಲಿ ಸಂಜು ಸ್ಯಾಮನ್ಸ್ ಜೊತೆ ಸೇರಿ 6 ರನ್ ಬಾರಿಸಿ 5 ಎಸೆತಗಳಲ್ಲಿ 16 ರನ್ ಗಳಿಸಿ ಗೆಲುವಿನ ನಗೆ ಬೀರಿದ್ರು. 5 ಪಂದ್ಯಗಳಲ್ಲಿ ಸರಣಿಯಲ್ಲಿ ಭಾರತ 4-0 ಪತಾಕೆ ಹಾರಿಸಿತು.




Leave a Reply

Your email address will not be published. Required fields are marked *

error: Content is protected !!