ಭಾರತದ ಗೆಲುವಿಗೆ ತಡೆಯಾಗಿ ನಿಂತ ಭಾರತೀಯರು.. ನಿಟ್ಟುಸಿರು ಬಿಟ್ಟ ನ್ಯೂಜಿಲೆಂಡ್

246

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕಾನ್ಪುರ್: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಈ ಮೂಲಕ 2 ಟೆಸ್ಟ್ ಗಳ ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಮುಗಿದಿದೆ. ಇದರಿಂದಾಗಿ ಗೆಲ್ಲುವ ಹಂತದಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ.

ನ್ಯೂಜಿಲೆಂಡ್ ಗೆ 284 ರನ್ ಗಳ ಟಾರ್ಗೆಟ್ ನೀಡಿತ್ತು. ಕೊನೆಯ ದಿನ 280 ರನ್ ಗಳಿಸಬೇಕಿದ್ದ ನ್ಯೂಜಿಲೆಂಡ್ 9 ವಿಕೆಟ್ 165 ರನ್ ಗಳಿಸಿತು. ಭಾರತಕ್ಕೆ ಗೆಲುವು ಸಿಗುತ್ತೆ ಅಂದುಕೊಳ್ಳುವಷ್ಟರಲ್ಲಿ ಪಂದ್ಯ ಡ್ರಾ ಆಗಿದೆ. ಭಾರತದ ಗೆಲುವಿಗೆ ಭಾರತೀಯ ಮೂಲದ ಆಟಗಾರರಿಗೆ ತಡೆಯಾಗಿ ನಿಂತರು.

ವಿಲ್ಲಿಂಗ್ಟನ್ ನಲ್ಲಿ ನೆಲೆಸಿರುವ ಭಾರತೀಯ ದಂಪತಿಗೆ ಜನಿಸಿರುವ ರಚಿನ್ ರವಿಚಂದ್ರ ಹಾಗೂ ಮುಂಬೈನಲ್ಲಿ ಜನಿಸಿದ ಅಜಾಝ್ ಯೂನಿಸ್ ಪಟೇಲ್ ನ್ಯೂಜಿಲೆಂಡ್ ತಂಡದಲ್ಲಿ ಆಟವಾಡುತ್ತಿದ್ದಾರೆ. ರವಿಚಂದ್ರ 18 ಹಾಗೂ ಪಟೇಲ್ 2 ರನ್ ಗಳಿಸಿ ಔಟ್ ಆಗದೆ ಉಳಿದರು. ಹೀಗಾಗಿ ಭಾರತಕ್ಕೆ ಸಿಗಬೇಕಿದ್ದ ಗೆಲುವು ಡ್ರಾನಲ್ಲಿ ಮುಕ್ತಾಯವಾಯಿತು.

ಲಥೀಮ್ 52, ವಿಲ್ ಯಂಗ್ 2, ಸಮರ್ವಿಲ್ 36, ವಿಲಿಯಂಸನ್ 24, ಟೇಲರ್ 2, ನಿಕೋಲಸ್ 1, ಬ್ಲಂಡಲ್ 2, ಜಮ್ಸನ್ 5, ಸೌಥಿ 4 ರನ್ ಗಳಿಸಿ ಔಟ್ ಆದರು. ಭಾರತ ಪರ ಜಡೇಜಾ 4, ಅಶ್ವಿನ್ 3 ವಿಕೆಟ್ ತೆಗೆದು ಮಿಂಚಿದರು. ಅಕ್ಸರ್ ಪಟೇಲ್ ಹಾಗೂ ಉಮೇಶ್ ಜಾಧವ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!