ಮೊದಲ ದಿನ ಶ್ರೇಯಸ್, ಗಿಲ್, ಜಡೇಜಾ ಭರ್ಜರಿ ಬ್ಯಾಟಿಂಗ್

567

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಂ ಇಂಡಿಯಾ ಇಂದಿನಿಂದ ಟೆಸ್ಟ್ ಪಂದ್ಯ ಆಡುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್ 13 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಚೇತೇಶ್ವರ 26 ಹಾಗೂ ಕ್ಯಾಪ್ಟನ್ ರಹಾನೆ 35 ರನ್ ಗಳಿಸಿ ಔಟ್ ಆದರು. ಇನ್ನೊಂದು ಕಡೆ ಶುಭನಂ ಗಿಲ್, ಶ್ರೇಯಸ್ ಅಯ್ಯರ್, ಜಡೇಜಾ ಭರ್ಜರಿ ಬ್ಯಾಟ್ ಬೀಸಿದರು.

ಗಿಲ್ 52 ರನ್ ಗಳಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ 75, ರವೀಂದ್ರ ಜಡೇಜಾ 50 ರನ್ ಗಳಿ ಆಟವಾಡುತ್ತಿದ್ದಾರೆ. ಕೈಲ್ ಜಮೀಸನ್ 3 ವಿಕೆಟ್ ತೆಗೆದು ಮಿಂಚಿದರು. ಟಿಮ್ ಸೌಥಿ 1 ವಿಕೆಟ್ ತೆಗೆದರು.




Leave a Reply

Your email address will not be published. Required fields are marked *

error: Content is protected !!