284 ರನ್ ಟಾರ್ಗೆಟ್ ನೀಡಿದ ಭಾರತ

432

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕಾನ್ಪೂರ್: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ 2ನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 284 ರನ್ ಗಳ ಟಾರ್ಗೆಟ್ ನೀಡಿದೆ.

2ನೇ ಇನ್ನಿಂಗ್ಸ್ ನಲ್ಲೂ ಮಿಂಚಿದ ಶ್ರೇಯಸ್ ಅಯ್ಯರ್ 65 ರನ್ ಗಳಿಸಿದ. ವೃದ್ಧಮಾನ್ ಶಾ 61 ರನ್ ಗಳಿಸಿದ. ಅಶ್ವಿನ್ 32 ರನ್ ಗಳಿಸಿದ. ಉಳಿದವರು ಎರಡಂಕಿ ದಾಟಲು ಒದ್ದಾಡಿದರು. 234 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಳ್ಳಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 5 ವಿಕೆಟ್ ಪಡೆದಿ ಟಿಮ್ ಸೌಥಿ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದು ಮತ್ತೆ ಮಿಂಚಿದ. ಜಮ್ ಸನ್ 3, ಅಜಾಝ್ ಪಟೇಲ್ 1 ವಿಕೆಟ್ ಪಡೆದ.

2ನೇ ಇನ್ನಿಂಗ್ಸ್ ಶುರು ಮಾಡಿರುವ ನ್ಯೂಜಿಲೆಂಡ್ ವಿಲ್ ಯಂಗ್(2) ವಿಕೆಟ್ ಕಳೆದುಕೊಂಡಿದೆ. 4 ರನ್ ಗೆ 1 ವಿಕೆಟ್ ಬಿದ್ದಿದ್ದು, ಇನ್ನು 280 ರನ್ ಗಳಿಸಬೇಕಿದೆ. ಭಾರತ 9 ವಿಕೆಟ್ ತೆಗೆದು ಗೆಲ್ಲಬೇಕಿದೆ. ಹೀಗಾಗಿ ಕೊನೆಯ ದಿನದ ಆಟ ರೋಚಕವಾಗಿರಲಿದೆ.




Leave a Reply

Your email address will not be published. Required fields are marked *

error: Content is protected !!