ನಾಳೆ 2ನೇ ಚುಟುಕು ಫೈಟ್

357

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ-20 ಪಂದ್ಯ ನಾಳೆ ನಡೆಯಲಿದೆ. ಈಡನ್ ಪಾರ್ಕ್ ನಲ್ಲಿ ಬ್ಲೂ ಬಾಯ್ಸ್ ಹಾಗೂ ಕಿವೀಸ್ ನಡುವೆ ಹಣಾಹಣಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸದಲ್ಲಿರುವ ಕೊಹ್ಲಿ ಪಡೆಗೆ ಶಾಕ್ ಕೊಡಲು ವಿಲಿಯಮ್ಸನ್ ಹುಡ್ಗರು ರೆಡಿಯಾಗಿದ್ದಾರೆ.

ಹಿಂದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ, ಶ್ರೇಯಸ ಅಯ್ಯರ, ಕ್ಯಾಪ್ಟನ್ ವಿರಾಟ ಕೊಹ್ಲಿ ಹಾಗೂ ಮನೀಶ ಪಾಂಡೆ ಭರ್ಜರಿಯಾಗಿ ಮಿಂಚಿದ್ರು. 204 ರನ್ ಗಳ ಬಿಗ್ ಟಾರ್ಗೆಟ್ ನ್ನ ಚೇಸ್ ಮಾಡಿ 19 ಓವರ್ ನಲ್ಲಿಯೇ ಕಂಪ್ಲೀಟ್ ಮಾಡಿ ಗೆಲುವಿನ ದಡ ಸೇರಿದ್ರು. ಶ್ರೇಯಸ ಹಾಗೂ ಪಾಂಡೆ ಜೋಡಿ ಕೊನೆ ಹಂತದಲ್ಲಿ ನ್ಯೂಜಿಲೆಂಡ್ ಬೌಲರ್ ಗಳನ್ನ ದಂಡಿಸಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಹಿಂದಿನ ಪಂದ್ಯದಲ್ಲಿ ಫೇಲ್ ಆಗಿರುವ ಸ್ಫೋಟಕ ಬ್ಯಾಟ್ಸಮನ್ ರೋಹಿತ ಶರ್ಮಾ ಸಿಡಿದು ನಿಂತ್ರ ರನ್ ಮಳೆ ಸುರಿಯುವುದು ಪಕ್ಕಾ. ರೋಹಿತಗೆ ಕೆ.ಎಲ್ ರಾಹುಲ ಸಾಥ್ ನೀಡಿದ್ರೆ ಬಿಗ್ ಸ್ಕೋರ್ ಬರುವುದರಲ್ಲಿ ಡೌಟೇ ಇಲ್ಲ. ಬೌಲಿಂಗ್ ನಲ್ಲಿ ಶೆಮಿ, ಜಡೇಜಾ, ಬೂಮ್ರಾ ಹಾಗೂ ಚಹಲ್ ಕಮಾಲ್ ಮಾಡ್ತಿದ್ದು ನಾಳೆಯ ಮಿಂಚುವ ಆತ್ಮವಿಶ್ವಾಸದಲ್ಲಿದ್ದಾರೆ.

ಇನ್ನು ಮೊದಲ ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್ ಟೀಂ 2ನೇ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಮಾರ್ಟನ್ ಗುಪ್ಟಿಲ್, ಕೊಲಿನ್ ಮುನ್ರೋ, ಕ್ಯಾಪ್ಟನ್ ಕೇನ್ ವಿಲಿಯಮ್ಸನ್, ಗ್ರ್ಯಾಂಡ್ ಹೋಮ್, ರಾಸ್ ಟೇಲರ್ ಬ್ಯಾಟ್ ಬೀಸಲು ಕಾಯುತ್ತಿದ್ದಾರೆ. ಈ ಘಟಾನುಘಟಿ ಬ್ಯಾಟ್ಸಮನ್ ಗಳಲ್ಲಿ ಒಂದು ಜೋಡಿ ಅಬ್ಬರಿಸಿತು ಅಂದ್ರೆ ಮ್ಯಾಚ್ ಟಫ್ ಫೈಟ್ ಆಗಲಿದೆ.

ಬೌಲಿಂಗ್ ನಲ್ಲಿ ಸೌಧಿ, ಟಿಮ್ ಸೌಥಿ, ಟಿಕ್ನರ್ ಸೇರಿದಂತೆ ಪ್ರತಿಯೊಬ್ಬರು ಭಾರತೀಯ ಆಟಗಾರರನ್ನ ಕಟ್ಟಿ ಹಾಕುವ ಸಾಮರ್ಥ್ಯವಿದೆ. ಹೀಗಾಗಿ ಸೌಧಿ ಹಾಗೂ ಸೌಥಿ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗಲಿದೆ. ಟಾಸ್ ಗೆದ್ದವರು ಫಿಲ್ಡಿಂಗ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.




Leave a Reply

Your email address will not be published. Required fields are marked *

error: Content is protected !!