ಬೂಮ್ರಾ ದಾಖಲೆಯ ದಾಳಿಗೆ ಲಂಕಾ ಉಡೀಸ್

525

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಮೊದಲ ಬ್ಯಾಟ್ ಮಾಡಿ 252 ರನ್ ಗೆ ಆಲೌಟ್ ಆಗಿತ್ತು. ನಂತರ ಬ್ಯಾಟ್ ಮಾಡಿದ ಶ್ರೀಲಂಕಾ ಪಡೆ, ಜಸ್ ಪ್ರಿತ್ ಬೂಮ್ರಾ ದಾಳಿಯಿಂದ 109 ರನ್ ಗಳಿಗೆ ಆಲೌಟ್ ಆಗಿದೆ.

ಜಸ್ ಪ್ರಿತ್ ಬೂಮ್ರಾ ಬರೋಬ್ಬರಿ 5 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ 8 ಬಾರಿ 5 ವಿಕೆಟ್ ಪಡೆಯುವುದರೊಂದಿಗೆ ಮಾಜಿ ಕ್ರಿಕೆಟರ್ ಕಪಿಲ್ ದೇವ್ ದಾಖಲೆ ಮುರಿದರು. ಇನ್ನು ಅಶ್ವಿನ್ ಹಾಗೂ ಶಮಿ ತಲಾ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 1 ವಿಕೆಟ್ ಪಡೆದ.

ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ. ರಿಶಬ್ ಪಂಥ್ 50, ರೋಹಿತ್ ಶರ್ಮಾ 46 ರನ್ ಗಳಿಸಿ ಔಟ್ ಆದರು. ಇದೀಗ ಮೊದಲ ಇನ್ನಿಂಗ್ಸ್ ನಲ್ಲಿ 92 ರನ್ ಗಳಿಸಿದ ಶ್ರೇಯಸ್ ಅಯ್ಯರ್ 22, ಅಶ್ವಿನ್ 10 ರನ್ ಗಳೊಂದಿಗೆ ಆಡುತ್ತಿದ್ದು, 346 ರನ್ ಮುನ್ನಡೆ ಸಾಧಿಸಿದೆ.  


TAG


Leave a Reply

Your email address will not be published. Required fields are marked *

error: Content is protected !!