ಸಿಂದಗಿಯಲ್ಲಿ ಅಪ್ಪು ಉತ್ಸವ: ನಟ ವಜ್ರಗಿರಿ ಭಾಗಿ

461

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಹೀಗಾಗಿ ಅಂದು ಭರ್ಜರಿಯಾಗಿ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ. ಈಗಾಗ್ಲೇ ರಾಜ್ಯ ಸೇರಿ ಹೊರ ರಾಜ್ಯಗಳಲ್ಲಿಯೂ ಪ್ರಮೋಷನ್ ನಡೆದಿದೆ. ಅದೆ ರೀತಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ‘ಅಪ್ಪು ಉತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬಸವೇಶ್ವರ ಸರ್ಕಲ್ ನಿಂದ ಆನಂದ ಥಿಯೇಟರ್ ತನಕ ಮೆರವಣಿಗೆ ನಡೆಯಲಿದೆ. ಈ ವೇಳೆ ಡೊಳ್ಳು ಕುಣಿತು, ಹಲಗೆ ಸದ್ದು, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯಗಳ ಮೇಳ ಇರಲಿದೆ. 50 ಸಾವಿರ ಮೌಲ್ಯದ ಸಿಡಿಮದ್ದು ಸುಡಲಾಗುತ್ತಿದೆ. 35 ಅಡಿ ಎತ್ತರದ ಪುನೀತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲಾಗುತ್ತಿದೆ. ಈ ವೇಳೆ ಟಿಫಿನ್, ಮಧ್ಯಾಹ್ನ ಚಿಕನ್ ಬಿರಿಯಾನಿ, ಸಂಜೆ ಟೀ, ಕಾಫಿ ವ್ಯವಸ್ಥೆ ಮಾಡಲಾಗಿದೆ.

ಇನ್ನೊಂದು ವಿಶೇಷ ಅಂದರೆ ಅಪ್ಪು ಉತ್ಸವದಲ್ಲಿ ಜೇಮ್ಸ್ ಚಿತ್ರದಲ್ಲಿ ನಟಿಸಿರುವ ನಟ ವಜ್ರಗಿರಿ ಅವರು ಭಾಗವಹಿಸುತ್ತಿದ್ದಾರೆ. ಸಚಿನ್ ಪಾಟೀಲ ಹಾಗೂ ತಂಡದವರು ಅಪ್ಪು ಉತ್ಸವ ಆಯೋಜನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!