ಜೇಮ್ಸ್ ಸಿನಿಮಾ ಎತ್ತಂಗಡಿಗೆ ಯತ್ನ: ಫ್ಯಾನ್ಸ್ ಆಕ್ರೋಶ

201

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಭರ್ಜರಿ ಯಶಸ್ಸು ಕಂಡಿದೆ. ಮೊದಲ ವಾರದ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿದೆ. ಆದರೆ, ಇದೀಗ ಚಿತ್ರಕ್ಕೆ ಎತ್ತಂಗಡಿಯ ಶಾಕ್ ಎದುರಾಗಿದೆ. ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಜೇಮ್ಸ್ ಸಿನಿಮಾವನ್ನು ಚಿತ್ರ ಮಂದಿರದಿಂದ ತೆಗೆಸಲಾಗುತ್ತೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಕಡೆ ಜೇಮ್ಸ್ ಚಿತ್ರವನ್ನು ಥಿಯೇಟರ್ ನಿಂದ ತೆಗೆಸಲಾಗುತ್ತಿರುವ ಕುರಿತು ಫೋನ್ ಗಳು ಬರುತ್ತಿವೆ. ಇದರಿಂದಾಗಿ ಅಪ್ಪು ಅಭಿಮಾನಿಗಳಿಗೆ ನಿರಾಶೆಯಾಗುತ್ತಿದೆ. ಅಪ್ಪು ಕೊನೆಯ ಚಿತ್ರನ್ನು ಥಿಯೇಟರ್ ನಲ್ಲಿ ನೋಡಬೇಕು ಅನ್ನೋ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!