ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಇಂದು ರಿಲೀಸ್ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಆದರೆ, ಯಾರಿಗೂ ಖುಷಿಯಿಂದ ಸಿನಿಮಾ ನೋಡಲು ಆಗುತ್ತಿಲ್ಲ.
ಸಿನಿಮಾ ಶುರುವಾಗುತ್ತಿದ್ದಂತೆ ಸ್ಕ್ರೀನ್ ಮೇಲೆ ಪುನೀತ್ ನೋಡಿ ಫ್ಯಾನ್ಸ್ ಕಣ್ಣೀರು ಹಾಕುತ್ತಿದ್ದಾರೆ. ಅದೆಷ್ಟೋ ಅಭಿಮಾನಿಗಳು ಸಿನಿಮಾ ನೋಡಲು ಆಗದೆ ಅಳುತ್ತಾ ಥಿಯೇಟರ್ ನಿಂದ ಹೊರ ಬಂದಿದ್ದಾರೆ. ಅಪ್ಪು ಮೂವಿಗೆ ಶಿವಣ್ಣ ಧ್ವನಿ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಮತ್ತಷ್ಟು ಕಾಡುತ್ತಿದೆ.