ಟಿ-20 ಸರಣಿ ಸೋತ ಭಾರತ

525

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಜಯಸಿದ್ದ ಟೀಂ ಇಂಡಿಯಾ ಟಿ-20 ಸರಣಿಯನ್ನು ಸೋತಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 5 ಟಿ-20 ಪಂದ್ಯಗಳ ಸರಣಿಯನ್ನು 3-2ರಿಂದ ಸೋತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಂಡ್ಯ ಲೆಕ್ಕಾಚಾರವನ್ನು ಕೆರಿಬಿಯನ್ ಬೌಲರ್ ಗಳು ತಲೆಕೆಳಗೆ ಮಾಡಿದರು. ಹೀಗಾಗಿ 165 ರನ್ ಗಳಿಗೆ 9 ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ 67 ರನ್, ತಿಲಕ್ ವರ್ಮಾ 27 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ವೆಸ್ಟ್ ಇಂಡೀಸ್ ಪರ ರೊಮರಿಯೊ ಶಫರ್ಡ್ 4 ವಿಕೆಟ್ ಪಡೆದು ಮಿಂಚಿದರು. ಹೋಲ್ಡರ್, ಹೊಸೈನ್ ತಲಾ 2, ರೋಸ್ಟನ್ 1 ವಿಕೆಟ್ ಪಡೆದರು.

166 ರನ್ ಗಳ ಗುರಿ ಬೆನ್ನು ಹತ್ತಿದ ವೆಸ್ಟ್ ಇಂಡೀಸ್ 18 ಓವರ್ ಗಳಿಗೆ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ಸರಣಿಯನ್ನು ವಶಪಡಿಸಿಕೊಂಡಿತು. ಬರ್ನಂಡನ್ ಕಿಂಗ್ ಅಜೇಯ 85, ಪೋರಾನ್ 47 ರನ್ ಗಳ ಭರ್ಜರಿ ಆಟದಿಂದಾಗಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಬೀಗಿತು.

ಟೀಂ ಇಂಡಿಯಾ ಪರ 8 ಆಟಗಾರರು ಬೌಲಿಂಗ್ ಮಾಡಿದರು. ಅರ್ಸದೀಪ್ ಸಿಂಗ್, ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು. ಪೂರಾನ್ ಮ್ಯಾನ್ ಆಫ್ ದಿ ಸಿರೀಸ್, ಶಫರ್ಡ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರ ಹೊಮ್ಮಿದರು.




Leave a Reply

Your email address will not be published. Required fields are marked *

error: Content is protected !!