ಜೈಸ್ವಾಲ್, ಗಿಲ್ ಅಬ್ಬರಕ್ಕೆ ಒಲಿದ ಜಯ

375

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದಿದೆ. ಇದೀಗ 5 ಟಿ-20 ಪಂದ್ಯಗಳ ಸರಣಿ ನಡೆದಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತು ನಿರಾಸೆ ಮೂಡಿಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಪಡೆ, ನಂತರ 2 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದೆ.

ಶನಿವಾರ ಸಂಜೆ ನಡೆದ 4ನೇ ಪಂದ್ಯದಲ್ಲಿ ಜೈಸ್ವಾಲ್, ಗಿಲ್ ಅಬ್ಬರದ ಆಟದಿಂದಾಗಿ 9 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಸರಣಿಯಲ್ಲಿ 2-2 ಸಮಬಲವಾಗಿದೆ. ಕೊನೆಯ ಪಂದ್ಯ ಯಾರು ಗೆಲ್ಲುತ್ತಾರೋ ಅವರಿಗೆ ಸರಣಿ ಒಲಿಯಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಹೋಪ್ 45, ಹಿಟ್ಮಯರ್ 61 ರನ್ ಭಾರಿಸಿದರು. ಭಾರತ ಪರ ಅರ್ಸದೀಪ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದರು. ಕುಲದೀಪ್ ಯಾದವ್ 2, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಜೈಸ್ವಾಲ್ ಅಜೇಯ 84, ಗಿಲ್ 77 ರನ್ ಗಳಿಂದಾಗಿ 1 ವಿಕೆಟ್ ಕಳೆದುಕೊಂಡು 17 ಓವರ್ ಗಳಲ್ಲಿಯೇ 179 ರನ್ ಗಳಿಸಿ ಗೆಲುವು ಸಾಧಿಸಿತು. ತಿಲಕ್ ವರ್ಮಾ ಅಜೇಯ 7 ರನ್ ಗಳಿಸಿದರು.




Leave a Reply

Your email address will not be published. Required fields are marked *

error: Content is protected !!