ಬೆಂಗಳೂರು ಪೊಲೀಸರಿಗೆ ತಲೆನೋವಾದ ಪ್ರೇಮ ಪ್ರಕರಣ

183

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಳ್ಳಂದೂರು ಪೊಲೀಸರು ಬಂಧಿಸಿರುವ ಪಾಕಿಸ್ತಾನ ಮೂಲದ 19 ವರ್ಷದ ಯುವತಿಯ ಪ್ರೇಮ ಪ್ರಕರಣ ಕಗ್ಗಂಟಾಗಿದೆ. ಬಂಧಿತ ಯುವತಿ ಇಕ್ರಾ ಜೀವನಿ ತಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲವೆಂದು ಹೇಳುತ್ತಿದ್ದಾಳೆ.

ಗೇಮಿಂಗ್ ಆಪ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಅನ್ನೋ ಯುವಕನೊಂದಿಗೆ ಪರಿಚಯವಾಗಿದೆ. ಆತ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವರ ಪರಿಚತ ಪ್ರೀತಿಗೆ ತಿರುಗಿದೆ. ಹೀಗಾಗಿ ಯುವತಿ ಇಕ್ರಾ ನೇಪಾಳ ಮಾರ್ಗವಾಗಿ ಅಕ್ರಮವಾಗಿ ಭಾರತ ಪ್ರವೇಶ ಪಡೆದಿದ್ದಾಳೆ.

ನಂತರ ಮುಲಾಯಂ ಹಾಗೂ ಇಕ್ರಾ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪಾಕ್ ನಲ್ಲಿರುವ ತನ್ನ ಕುಟುಂಬಸ್ಥರಿಗೆ ಫೋನ್ ಮಾಡುವ ಸಂದರ್ಭದಲ್ಲಿ ಗುಪ್ತಚರಕ್ಕೆ ಮಾಹಿತಿ ಸಿಕ್ಕಿದೆ. ಆಗ ಇಕ್ರಾ ಹಿನ್ನೆಲೆ ಗೊತ್ತಾಗಿದೆ. ಈಗ ಎಫ್ಆರ್ ಆರ್ ಓ ವಶದಲ್ಲಿದ್ದು, ತಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಾವಿಬ್ಬರು ಮದುವೆಯಾಗಿದ್ದೇವೆ ಎನ್ನುತ್ತಿದ್ದಾಳೆ. ಹೀಗಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.




Leave a Reply

Your email address will not be published. Required fields are marked *

error: Content is protected !!