3-0 ಅಂತರದಿಂದ ಸರಣಿ ಸೋತ ಭಾರತ

324

ಬೈಓವಲ್: ಟಿ-20 ಸರಣಿಯನ್ನ ಕ್ಲೀನ್ ಸ್ವಿಪ್ ಮಾಡಿಕೊಂಡಿದ್ದ ಕೊಹ್ಲಿ ಪಡೆ ಒನ್ ಡೇ ಯನ್ನ ಕ್ಲೀನ್ ಸ್ವಿಪ್ ನೊಂದಿಗೆ ಸೋತಿದೆ. 3 ಏಕದಿನ ಪಂದ್ಯಗಳಲ್ಲಿ ಭಾರತ 3-0 ಅಂತರದಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕನ್ನಡಿಗ ಕೆ.ಎಲ್ ರಾಹುಲ ಭರ್ಜರಿ ಶತಕ (112), ಶ್ರೇಯಸ ಅಯ್ಯರ (62), ಮನೀಷ ಪಾಂಡೆ (42) ಹಾಗೂ ಪೃಥ್ವಿ ಶಾ (40) ಆಟದಿಂದ 296 ರನ್ ಗಳ ಹೋರಾಟಾತ್ಮಕ ಸ್ಕೋರ್ ಮಾಡಿತ್ತು. ನಾಯಕ ವಿರಾಟ ಕೊಹ್ಲಿ 9, ಇನ್ನೊಬ್ಬ ಕನ್ನಡಿಗ ಮಯಾಂಕ ಅಗರ್ವಾಲ್ 1 ರನ್ ಬಾರಿಸಿ ನಿರಾಸೆ ಮೂಡಿಸಿದ್ರು.

ಬೌಲರ್ ಗಳಾದ ಶಾರ್ದೂಲ್ ಠಾಕೂರ್ 7 ರನ್ ಗಳಿಸಿ ಔಟ್ ಆದ. ಆಲ್ ರೌಂಡರ್ ಜಡೇಜಾ 8, ನವದೀಪ ಸೈನಿ 8 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದ್ರು. ನ್ಯೂಜಿಲೆಂಡ್ ಪರ ಬೆನ್ನೆಟ್ ಭರ್ಜರಿ 4 ವಿಕೆಟ್ ಪಡೆದು ಮಿಂಚಿದ. ಜಮ್ಸನ್ ಹಾಗೂ ನೀಶಮ್ ತಲಾ 1 ವಿಕೆಟ್ ತೆಗದ್ರು.

297 ರನ್ ಚೇಸ್ ಮಾಡಿದ ನ್ಯೂಜಿಲೆಂಡ್ ಮಾರ್ಟಿನ್ ಗುಪ್ಟಿಲ್ 66, ನಿಕೋಲ್ಸ್ 80, ಬೌಲರ್ ಗ್ರ್ಯಾಂಡ್ ಹೋಮ್ 58 ರನ್ ಗಳ ಭರ್ಜರಿ ಆಟದಿಂದ 47.1 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 300 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಕ್ಯಾಪ್ಟನ್ ವಿಲಿಯಮ್ಸನ್ 22, ರಾಸ್ ಟೇಲರ್ 12, ಟಾಮ್ ಲಥಮ್ 32 ರನ್ ಗಳಿಸಿದ್ರು. ಟೀಂ ಇಂಡಿಯಾ ಪರ ಚೆಹಲ್ 3 ವಿಕೆಟ್ ಪಡೆದು ಮಿಂಚಿದ. ರವೀಂದ್ರ ಜಡೇಜಾ ಹಾಗೂ ಠಾಕೂರ್ ತಲಾ 1 ವಿಕೆಟ್ ಪಡೆದ್ರು.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3-0 ಅಂತರದಿಂದ ಒನ್ ಡೇ ಸರಣಿಯನ್ನ ಗೆದ್ದುಕೊಳ್ಳುವ ಮೂಲಕ ಟಿ-20 ಸರಣಿ ಸೋಲಿನ ಸೇಡು ತೀರಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!