ಮೊದಲ ದಿನವೇ ಅಲ್ಪ ಮೊತ್ತಕ್ಕೆ ಬಾಂಗ್ಲಾ ಸರ್ವಪತನ

367

ಇಂದೋರ್: ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಭಾರತದ ಮಾರಕ ಬೌಲಿಂಗ್ ದಾಳಿಗೆ 58.3 ಓವರ್ ಗಳಲ್ಲಿ ಕೇವಲ 150 ರನ್ ಗಳಿಗೆ ಆಲೌಟ್ ಆಯ್ತು.

ಮುಶ್ಫಿಕ್ ರೆಹಮಾನ್ 43, ಮೊಮಿನಲ್ ಹಕ್ 37, ಲಿಟಲ್ ದಾಸ್ 21, ಮೊಹಮ್ಮದ್ ಮಿಥನ 13, ಮಹಮ್ಮದುಲ್ಲಾ 10 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಎರಡಂಕಿ ಗೆರೆ ದಾಟಲು ಆಗ್ಲಿಲ್ಲ. ಈ ಮೂಲಕ ಮೊದಲ ದಿನವೇ ಸರ್ವಪತನ ಕಂಡಿತು.

ಟೀಂ ಇಂಡಿಯಾ ಪರ ಮೊಹಮ್ಮದ ಶೆಮಿ 3 ವಿಕೆಟ್ ಪಡೆದ್ರೆ ಉಮೇಶ ಯಾದವ, ರವಿಂದ್ರ ಅಶ್ವಿನ್ ಹಾಗೂ ಇಶಾಂತ ಶರ್ಮಾ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು. ಇನ್ನು 150 ಸ್ಕೋರ್ ಬೆನ್ನು ಹತ್ತಿರುವ ಭಾರತ 26 ಓವರ್ ಗಳಲ್ಲಿ 86 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

ಸೌಥ್ ಆಫ್ರಿಕಾ ವಿರುದ್ಧ ಮಿಂಚಿದ್ದ ಆರಂಭಿಕ ಆಟಗಾರ ರೋಹಿತ ಶರ್ಮಾ ಕೇವಲ 6 ರನ್ ಗಳಿಸಿ ಔಟ್ ಆದ್ರು. ಕನ್ನಡಿಗ ಮಯಾಂಕ ಅರ್ಗವಾಲ್ 37 ಹಾಗೂ ಚೇತೇಶ್ವರ ಪೂಜಾರ 43 ರನ್ ಗಳಿಸಿ ಮೈದಾನದಲ್ಲಿ ಉಳಿದಿದ್ದಾರೆ. ಬಾಂಗ್ಲಾ ಪರ ಅಬು ಜಯದ್ ಒಂದು ವಿಕೆಟ್ ಕಿತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!