ಮತ್ತೊಂದು ಸಂಕಷ್ಟಕ್ಕೆ ದೂಡಿತ್ತು ಪಾಕಿಸ್ತಾನದ ಚಿಕಿತ್ಸೆ

246

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೂತ್ರಪಿಂಡದ ಕಸಿ ಮಾಡಿಸಿಕೊಂಡ ಬಳಿಕ ಮೂತ್ರನಾಳ ಸೋಂಕಿಗೆ ಒಳಗಾಗಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರೋಬೋಟ್ ಸಹಾಯದಿಂದ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಮೂತ್ರಶಾಸ್ತ್ರ ತಜ್ಞ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕರಾದ ಡಾ ಮೋಹನ್ ಕೇಶವಮೂರ್ತಿ ಅವರ ತಂಡ ಇಂತಹದೊಂದು ಸಾಧನೆ ಮಾಡಿದೆ.

ಈ ಕುರಿತು ಮಾತನಾಡಿದ ಡಾ. ಮೋಹನ್‌ ಕೇಶವಮೂರ್ತಿ, ಓಮಾನಿ ದೇಶದ 51 ವರ್ಷದ ರೇಷ್ಮ ಎಂಬ ಮಹಿಳೆಯು ಒಂದು ವರ್ಷದ ಹಿಂದೆ ಕೆಲ ಕಾರಣದಿಂದ ಮೂತ್ರಪಿಂಡ ಕಳೆದುಕೊಂಡು, ಪಾಕಿಸ್ತಾನದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದರೆ, ಇವರ ದೇಹ ಹಾಗೂ ರಕ್ತಕ್ಕೆ ಹೊಂದಿಕೆಯಾಗಿರಲಿಲ್ಲ. ಮೂತ್ರನಾಳ ಕಸಿ ಮಾಡುವ ವೇಳೆ ಮೂತ್ರನಾಳದ ಸ್ಟೆಂಟಿಂಗ್ ಅನ್ನು (ಡಬಲ್ ಜೆ ಸ್ಟೆಂಟ್) ಅಳವಡಿಸಲಾಗಿತ್ತು. ಮೂತ್ರವಿಸರ್ಜನೆಗೆಂದು ಪ್ಲಾಸ್ಟಿಕ್‌ ಟ್ಯೂಬ್‌ ಅಳವಡಿಸಲಾಗಿತ್ತು. ಇದು ತೀರ ತೆಳುವಾದ್ದರಿಂದ ಕೇವಲ ಒಂದು ವರ್ಷದಲ್ಲಿಯೇ ಆ ಡಬಲ್‌ ಜೆ ಸ್ಟಂಟ್‌ ಮುರಿದಿತ್ತು. ಹೀಗಾಗಿ ಮೂತ್ರಕೋಶದ ಸೋಂಕು ಹರಡಲು ಪ್ರಾರಂಭಾಗಿದ್ದರಿಂದ ಮುರಿದು ಹೋದ ಸ್ಟಂಟ್‌ ತೆಗೆದು ಹಾಕುವುದು ಅನಿವಾರ್ಯವಾಗಿತ್ತು. ಈ ಚಿಕಿತ್ಸೆಗೆ ಪಾಕಿಸ್ತಾನದಲ್ಲಿ ಯಾವ ಆಸ್ಪತ್ರೆಯಲ್ಲೂ ವ್ಯವಸ್ಥೆ ಇಲ್ಲದ ಪರಿಣಾಮ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದರು.

ಫೋರ್ಟಿಸ್ ಆಸ್ಪತ್ರೆಯಲ್ಲಿರುವ ರೋಬೋಟಿಕ್‌  ತಂತ್ರಜ್ಞಾನ ಬಳಸಿಕೊಂಡು, 3 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಮುರಿದು ಹೋಗಿದ್ದ ಸ್ಟಂಟ್‌ ಹೊರತೆಗೆದು, ಕಸಿ ಮಾಡಲಾದ ಮೂತ್ರಪಿಂಡದಿಂದಲೇ ನೇರವಾಗಿ  ಮೂತ್ರ ವಿಸರ್ಜನೆಗೆ ತೊಂದರೆಯಾದಂತೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ರೋಗಿ ಸಂಪೂರ್ಣ ಗುಣಮುಖರಾಗಿದ್ದು, ಮೂತ್ರಕೋಶ ಸೋಂಕಿನಿಂದಲೂ ಮುಕ್ತರಾಗಿ, ಆರೋಗ್ಯದಿಂದ್ದಾರೆ ಎಂದು ತಿಳಿಸಿದರು.

ಫೋರ್ಟಿಸ್ ಆಸ್ಪತ್ರೆ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಫೋರ್ಟಿಸ್ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಮಹಿಳೆಯು ಭಾರತದಲ್ಲಿ ಅದರಲ್ಲೂ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿ, ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದು ನಮ್ಮ ಆಸ್ಪತ್ರೆಗೆ ಹೆಮ್ಮೆಯ ವಿಚಾರ ಎಂದರು.

ಓಮಾನಿ ದೇಶದವರಿಗೆ ಪಾಕಿಸ್ತಾನ ಹತ್ತಿರವಾಗುವುದರಿಂದ ರೇಷ್ಮ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಅದು ಯಶಸ್ವಿಯಾಗುವ ಬದಲು ಮತ್ತೊಂದು ತೊಂದರೆಗೆ ಸಿಲುಕಿಸಿತ್ತು. ಹೀಗಾಗಿ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯುವ ಮೂಲಕ ಎಂದಿನ ಬದುಕು ಮರಳಿ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!