ಕುಂಬ್ಳೆ, ಭಜ್ಜಿ ದಾಖಲೆ ಮುರಿದ ಇಶಾಂತ

361

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮೊದಲ ಟೆಸ್ಟ್ ಪಂದ್ಯವಾಡ್ತಿದೆ. ಎರಡನೇ ದಿನದ ಆಟದಲ್ಲಿ ಐದು ವಿಕೆಟ್ ಪಡೆದ ಇಶಾಂತ ಶರ್ಮಾ ಹೊಸ ದಾಖಲೆ ಮಾಡಿದ್ದಾರೆ. ಕರ್ನಾಟಕ ಮೂಲದ ಬೌಲರ್ ಅನಿಲ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಅವರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.

42 ರನ್ ನೀಡಿ ಐದು ವಿಕೆಟ್ ಪಡೆದ ಇಶಾಂತ ಶರ್ಮಾ, ವೆಸ್ಟ್ ಇಂಡೀಸ್ ನೆಲದಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಳ್ಳುವ ಮೂಲಕ ಕುಂಬ್ಳೆ, ಭಜ್ಜಿ ದಾಖಲೆ ಸರಿಗಟ್ಟಿದ್ದಾರೆ. ಈ ಮೂಲಕ ಮೂರು ಬಾರಿ ಐದು ವಿಕೆಟ್ ಪಡೆದಿದ್ದು ಒಟ್ಟಾರೆಯಾಗಿ ಇದುವರೆಗೂ 9 ಬಾರಿ ಐದು ವಿಕೆಟ್ ಪಡೆದಿದ್ದಾರೆ.

ಇದುವರೆಗೆ ಆಡಿರುವ 91 ಟೆಸ್ಟ್ ಪಂದ್ಯಗಳಲ್ಲಿ 272 ವಿಕೆಟ್ ಪಡೆದಿದ್ದು, 74 ರನ್ ಗಳಿಗೆ 7 ವಿಕೆಟ್ ಬೆಸ್ಟ್ ಬೌಲಿಂಗ್ ಆಗಿದೆ.




Leave a Reply

Your email address will not be published. Required fields are marked *

error: Content is protected !!