ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ರಾಜೀನಾಮೆ!

231

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೋತಿದೆ. ಈ ಸೋಲಿನ ಬಳಿಕ ಕೋಚ್ ಶೋರ್ಡ್ ಮರಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಒಲಿಂಪಿಕ್ಸ್ ಕೂಟದಲ್ಲಿ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಮೊಟ್ಟ ಮೊದಲ ಬಾರಿಗೆ ಸೆಮಿಫೈನಲ್ ವರೆಗೂ ಬಂದಿತ್ತು. ಇದರ ಹಿಂದೆ ಕೋಚ್ ಶೋರ್ಡ್ ಮರಿನ್ ಶ್ರಮವಿದೆ. ಆದ್ರೆ, ಕಂಚಿನ ಪದಕದ ಆಸೆಯೂ ಶುಕ್ರವಾರ ಕಮರಿತು. ಈಗ ಕೋಚ್ ಮರಿನ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ನೆದರ್ಲ್ಯಾಂಡ್ಸ್ ಪರ ಆಟವಾಡಿರುವ ಮರಿನ್ ಸಾಕಷ್ಟು ಸಾಧನೆ ಮಾಡಿದ್ದಾರೆ. ಅಂಡರ್ 21 ಮಹಿಳಾ ತಂಡವನ್ನ ವಿಶ್ವಕಪ್ ನಲ್ಲಿ ಗೆಲ್ಲಿಸಿದ್ದಾರೆ. ಹಿರಿಯ ಮಹಿಳಾ ತಂಡವನ್ನ ಹಾಕಿ ವರ್ಲ್ಡ್ ಲೀಗ್ ನಲ್ಲಿ ಚಿನ್ನದ ಪದಕ ಬರುವಂತೆ ಮಾಡಿದ್ದಾರೆ. ಇವರನ್ನ 2017ರಲ್ಲಿ ಭಾರತೀಯ ಮಹಿಳಾ ತಂಡದ ಕೋಚ್ ಆಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಆಯೋಜಿಸಿತ್ತು. ಅಲ್ದೇ, ಅವರ ಅವಧಿಯನ್ನ ವಿಸ್ತರಿಸುವ ಅವಕಾಶ ನೀಡಿತ್ತು. ಈಗ ರಾಜೀನಾಮೆ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!