ಅಥ್ಲೆಟಿಕ್ಸ್ ಗೆ ವಿದಾಯ ಹೇಳಲು ಸ್ವಪ್ನಾ ಬರ್ಮನ್ ರೆಡಿ

647

ಪ್ರಜಾಸ್ತ್ರ ಕ್ರೀಡಾ ಸುದ್ದಿ

ತೆಲಂಗಾಣ: ಜಕಾರ್ತನಲ್ಲಿ 2018ರಲ್ಲಿ ನಡೆದ ಏಷನ್ಸ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಅಥ್ಲೆಟಿಕ್ಸ್ ಸ್ವಪ್ನಾ ಬರ್ಮನ್ ಬೆನ್ನು ನೋವಿನ ಸಮಸ್ಯೆಯಿಂದ ಕ್ರೀಡೆಗೆ ವಿದಾಯ ಹೇಳಲು ಬಯಿಸಿದ್ದಾರೆ.

ತೆಲಂಗಾಣದ ವಾರಂಗಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಹೈಜಂಪ್ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸಿದ್ದಾರೆ. ಬೆನ್ನು ನೋವಿನಿಂದ ಸಾಕಷ್ಟು ಬಳಲುತ್ತಿದ್ದು, ಇನ್ನು ಮುಂದೆ ಆಟ ಆಡುವುದು ಸುಲಭದ ಮಾತಲ್ಲ. ಹೀಗಾಗಿ ನಿವೃತ್ತಿ ಬಗ್ಗೆ ಸಿದ್ದಳಿದ್ದು, ಕೊಲ್ಕತ್ತಾಗೆ ಹೋದ ಮೇಲೆ ನಿರ್ಧಾರ ಪ್ರಕಟಿಸುವೆ ಎಂದಿದ್ದಾರೆ.

ಜರ್ಕಾತ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಹೆಪ್ಟಾಥ್ಲಾನ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೆಟಿಕ್ ಎನ್ನಿಸಿಕೊಂಡಿದ್ದಾರೆ. ದೋಹಾದಲ್ಲಿ 2019ರಲ್ಲಿ ನಡೆದ ಏಷ್ಯನ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.




Leave a Reply

Your email address will not be published. Required fields are marked *

error: Content is protected !!