ಪ್ರಜಾಸ್ತ್ರ ಸುದ್ದಿ
ಹಿಸಾರ್: ಟಾಕ್ ಟಾಕ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿ, ಟಿಕ್ ಟಾಕ್ ಸ್ಟಾರ್ ಎನಿಸಿಕೊಂಡಿರುವ ಹರಿಯಾಣದ ಸೋನಾಲಿ ಪೊಗೆಟ್, ಬಿಜೆಪಿ ಸೇರಿ ಲೀಡರ್ ಆದ್ರು. ಇಂಥಾ ಸೋನಾಲಿ ಪೊಗೆಟ್, ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗೆ ಚಪ್ಪಲಿಲೆ ಹೊಡೆದು ಸುದ್ದಿಯಾಗಿದ್ದಾರೆ.
ರೈತರ ಸಮಸ್ಯೆ ಕೇಳಲು ಹಿಸಾರ್ ಮಾರುಕಟ್ಟೆಗೆ ಸೋನಾಲಿ ಪೊಗೆಟ್ ತೆರಳಿದ್ದಾರೆ. ಈ ವೇಳೆ ಮಾರ್ಕೆಟ್ ಕಾರ್ಯದರ್ಶಿ ಜೊತೆಗೆ ಮಾತಿಗೆ ಮಾತು ಬೆಳದಿದೆ. ಅಧಿಕಾರಿ ಅಸಭ್ಯವಾಗಿ ಮಾತ್ನಾಡಿದ್ದಾರೆ ಎಂದು ಹೇಳಿ, ಪೊಲೀಸರ ಎದುರೇ ಸರ್ಕಾರಿ ಅಧಿಕಾರಿಗೆ ಚಪ್ಪಲಿಲೆ ಹೊಡೆದಿದ್ದಾರೆ. ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.
ಅಧಿಕಾರಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ರೂ ಪೊಲೀಸ್ರು ಸುಮ್ಮನೆ ನಿಂತಿರೋದ್ಯಾಕೆ? ಹೀಗೆ ಚಪ್ಪಲಿಯಿಂದ ಹೊಡೆಯುವಷ್ಟು ಅಸಭ್ಯವಾಗಿ ಅಧಿಕಾರಿ ಮಾತ್ನಾಡಿರುವುದು ಏನು? ಸೋನಾಲಿ ಪೊಗೆಟ್ ಯಾವ ಧೈರ್ಯದ ಮೇಲೆ ಈ ರೀತಿ ನಡೆದುಕೊಂಡಿದ್ದಾರೆ ಅನ್ನೋ ಪ್ರಶ್ನೆಗಳು ಮೂಡಿವೆ.
ಟಿಕ್ ಟಾಕ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ಸೋನಾಲಿ ಪೊಗೆಟ್ ಗೆ ಕಳೆದ 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತು. ಹಿಸಾರ್ ಜಿಲ್ಲೆ ಅಡಂಪೂರ್ ನಿಂದ ಸ್ಪರ್ಧಿಸಿದ್ದ ಸೋನಾಲಿ, ಕಾಂಗ್ರೆಸ್ ಅಭ್ಯರ್ಥಿ ಕುಲದೀಪ ಬಿಷ್ಣೋಯ್ ಎದುರು ಸೋಲು ಅನುಭವಿಸಿದ್ರು.