ಅತ್ಯಾಚಾರವೆಸಗಿ ಸೋನಾಲಿ ಪೊಗೆಟ್ ಕೊಲೆ?

228

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ಬಿಜೆಪಿ ನಾಯಕಿ ಸೋನಾಲಿ ಪೊಗೆಟ್ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಸಹೋದರ ರಿಂಕು ಧಾಕಾ ಆರೋಪಿಸಿದ್ದಾರೆ. ಸೊನಾಲಿ ಸಹಾಯಕ ಸುಧೀರ್ ಸಂಗ್ವಾನ್ ವಿರುದ್ಧ ರಿಂಕು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸೋನಾಲಿ ಸಹೋದರ ವತನ್ ಧಾಕಾ, ಆಗಸ್ಟ್ 23ರ ಬೆಳಗ್ಗೆ 8ಗಂಟೆಗೆ ಫೋನ್ ಮಾಡಿದ್ದ ಸುಧೀರ್, ರಾತ್ರಿ 2 ಗಂಟೆಗೆ ಕುಸಿದು ಬಿದ್ದಿದ್ದರು ಎಂದು ಹೇಳಿದ್ದ. ನಮಗೆ ಯಾಕೆ ಫೋನ್ ಮಾಡಲಿಲ್ಲ ಎಂದರೆ, ಪ್ರತಿ ಬಾರಿ ವಿಭಿನ್ನ ಹೇಳಿಕೆ ನೀಡುತ್ತಿದ್ದ. ಹೀಗಾಗಿ ಅಲ್ಲಿ ಏನೋ ಆಗಿದೆ ಅನ್ನೋ ಅನುಮಾನ ಮೂಡಿದೆ ಎಂದಿದ್ದಾರೆ.

ಕೊನೆಯ ಬಾರಿ ಫೋನ್ ಮಾಡಿದಾಗ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ತಾಯಿಗೆ ಹೇಳಿದ್ದಳಂತೆ. ಆಹಾರದಲ್ಲಿ ಏನಾದರೂ ಸೇರಿಸಿರಬಹುದು. ಈ ಕುರಿತು ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

42 ವರ್ಷದ ಸೋನಾಲಿ ಪೊಗೆಟ್ ಗೋವಾದ ಪಣಜಿಯಲ್ಲಿ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ರಾಜ್ಯ ಪೊಲೀಸರು ಸಾವಿನ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಟಿಕ್ ಟಾಕ್ ವಿಡಿಯೋ ಮೂಲಕ ಜನಪ್ರಿಯತೆ ಪಡೆದಿದ್ದ ಸೋನಾಲಿ, 2020ರಲ್ಲಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದರು. 2019ರಲ್ಲಿ ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದಂಪುರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಂದು ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ಸೋನಾಲಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿತ್ತು. ಈಗ ಅವರ ಸಾವಾಗಿದೆ. ಸೋನಾಲಿ ಪತಿ ಸಂಜಯ್ ಪೊಗೆಟ್ 2016ರಲ್ಲಿ ಫಾರ್ಮ್ ಹೌಸ್ ನಲ್ಲಿ ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!