ಸೆಮಿಫೈನಲ್ ನಲ್ಲಿ ಸೋತ ಭಾರತ ಹಾಕಿ ತಂಡ: ಚಿನ್ನದ ಕನಸು ಭಗ್ನ

239

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದ ಕೋಟ್ಯಾಂತರ ಅಭಿಮಾನಿಗಳ ಚಿನ್ನದ ಕನಸು ಭಗ್ನಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದೆ. 2-5 ಅಂತರದಿಂದ ಮನ್ ಪ್ರೀತ್ ಸಿಂಗ್ ನಾಯಕತ್ವದ ತಂಡದ ನಿರಾಸೆ ಅನುಭವಿಸಿದೆ.

ಮೊದಲು ಬೆಲ್ಜಿಯಂ ಗೋಲು ಗಳಿಸಿತು. ನಂತರ ಭಾರತದ ಖಾತೆಗೆ ಗೋಲು ಬಂದಿತು. ಮೂರನೇ ಕ್ವಾರ್ಟರ್ ತನಕ 2-2 ಸಮಬಲ ಸಾಧಿಸಿದ್ವು. ಆದ್ರೆ, ಮುಂದೆ ಬೆಲ್ಜಿಯಂ ತನ್ನ ಪ್ರಾಬಲ್ಯ ಮೆರೆಯಿತು. ಇದ್ರಿಂದಾಗಿ 2-5 ಅಂತರದಿಂದ ಭಾರತ ತಂಡ ಸೋಲೊಪ್ಪಿಕೊಂಡಿತು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಆಟದಲ್ಲಿ ಸೋಲು ಗೆಲುವು ಸಹಜ. ಮುಂದಿನ ಪಂದ್ಯಗಳಲ್ಲಿ ಇನ್ನು ಉತ್ತಮವಾಗಿ ಆಡಿ ಎಂದು ಹೈರಿಸುತ್ತಾ, ಭಾರತೀಯ ಆಟಗಾರರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!